ಟ್ರಂಪ್​ಗೆ ಮೋದಿ ಲಕ್ಷ್ಮಣರೇಖೆ – ಮೊದಲ ಬಾರಿ ತಲೆಬಾಗಿದ ದೊಡ್ಡಣ್ಣ

1 Star2 Stars3 Stars4 Stars5 Stars (No Ratings Yet)
Loading...

ಪಾಕ್ ವಿಚಾರದಲ್ಲಿ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ದಿಗ್ವಿಜಯ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಚಾಕಚಕ್ಯತೆಯಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್​ಗೆ ಭಾರೀ ಮುಖಭಂಗವಾಗಿದೆ. ಕಾಶ್ಮೀರ ವಿಚಾರದಲ್ಲಿ ಅಮೆರಿಕಕ್ಕೆ ಪ್ರಧಾನಿ ಮೋದಿ ಲಕ್ಷ್ಮಣ ರೇಖೆ ಎಳೆದಿದ್ದಾರೆ. ಕಾಶ್ಮೀರ ಭಾರತದ ಆಂತರಿಕ ವಿಚಾರ, ಮಧ್ಯಪ್ರವೇಶ ಸಹಿಸಲ್ಲ ಅಂತ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಮೋದಿ ಮುಖಾಮುಖಿ ತಾಕೀತು ಮಾಡಿದ್ದಾರೆ.
ಮೋದಿ ಮಾತಿನ ಏಟಿನಿಂದ ಕಂಗೆಟ್ಟ ಡೊನಾಲ್ಡ್ ಟ್ರಂಪ್ ಸೈಲೆಂಟ್ ಆಗಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.

ಫ್ರಾನ್ಸ್‌ನ ಬಿಯರಿಟ್ಜ್‌ನಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ಪ್ರಧಾನಿ ಮೋದಿ, ಭಾರತ ಮತ್ತು ಪಾಕಿಸ್ತಾನ ಎರಡೂ ಬಡತನ ಮತ್ತು ಅನಕ್ಷರತೆಯ ವಿರುದ್ಧ ಹೋರಾಡಬೇಕಾಗಿದೆ ಎಂದರು. ತಾನು ಚುನಾವಣೆಯಲ್ಲಿ ಗೆದ್ದ ನಂತರ ನಾನು ಪಾಕಿಸ್ತಾನ ಪ್ರಧಾನಿಗೆ ಕರೆ ಮಾಡಿ, ಎರಡೂ ದೇಶಗಳು ಬಡತನ, ಅನಕ್ಷರತೆ ಮತ್ತು ಇತರ ದೊಡ್ಡ ಸಮಸ್ಯೆಗಳ ವಿರುದ್ಧ ಹೋರಾಡಬೇಕಾಗಿದೆ ಎಂದು ಹೇಳಿದ್ದೆ. ನಮ್ಮ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಮೋದಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗಳು ದ್ವಿಪಕ್ಷೀಯ ಮತ್ತು ನಾವು ವಿಶ್ವದ ಯಾವುದೇ ದೇಶದಿಂದ ಮಧ್ಯಸ್ಥಿಕೆ ಬಯಸುವುದಿಲ್ಲ. 1947ಕ್ಕಿಂತ ಮೊದಲು ನಾವು ಒಂದೇ ದೇಶವಾಗಿದ್ದು, ಈಗಲೂ ನಾವು ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಮೋದಿ ಸ್ಪಷ್ಟಪಡಿಸಿದ್ದಾರೆ.

ನಾವು ಕಳೆದ ರಾತ್ರಿ ಕಾಶ್ಮೀರದ ಬಗ್ಗೆ ಮಾತನಾಡಿದ್ದೇವೆ. ಮೋದಿ ಕಾಶ್ಮೀರದ ಪರಿಸ್ಥಿತಿ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದು ನಿಜವಾಗಿಯೂ ಭಾವಿಸುವೆ ಎಂದು ಟ್ರಂಪ್‌ ಹೇಳಿದರು. ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷ ಟ್ರಂಪ್ ಅವರು ಎರಡೂ ಕಡೆಯವರು ಬಯಸಿದರೆ ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದರು.

Add Comment