ನಾಪತ್ತೆಯಾಗಿರುವ ಜಲಾಂತರ್ಗಾಮಿ ಹಡಗಿನಲ್ಲಿದ್ರು ಪಾಕಿಸ್ತಾನದ ಶ್ರೀಮಂತ ವ್ಯಕ್ತಿ

0

ವಾಷಿಂಗ್ಟನ್: ಎರಡು ದಿನಗಳ ಹಿಂದೆ ಉತ್ತರ ಅಟ್ಲಾಂಟಿಕ್‌ನಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದೆ. ಸದ್ಯ ಬಂದಿರುವ ಮಾಹಿತಿಯ ಪ್ರಕಾರ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ ಹಾಗೂ ಅವರ ಪುತ್ರ ಕೂಡ ಇದ್ದರು ಎಂಬುದು ವರದಿಯಾಗಿದೆ.

ಓಷನ್‌ಗೇಟ್ ಎಕ್ಸ್‌ಪೆಂಡಿಷನ್ಸ್ ಕಂಪನಿಗೆ ಸೇರಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕಿಳಿದ ಕೇವಲ ಎರಡು ಗಂಟೆಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದೆ. ಅದು 96 ಗಂಟೆಗಳ ಆಮ್ಲಜನಕ ಪೂರೈಕೆ ಹೊಂದಿದ್ದು, ನಾಪತ್ತೆಯಾಗಿರುವ ಜಲಾಂತರ್ಗಾಮಿಯೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಸುರಕ್ಷಿತವಾಗಿ ಕರೆತರಲು ಅನೇಕ ಸರ್ಕಾರಿ ಸಂಸ್ಥೆಗಳು ಹಾಗೂ ಕಂಪನಿಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಸದ್ಯ ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಐವರಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಶಹಜಾದಾ ದಾವೂದ್ ಹಾಗೂ ಅವರ ಮಗ ಹುಸೇನೆ ದಾವೂದ್ ಇದ್ದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಶಹಜಾದಾ ದಾವೂದ್ ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷರಾಗಿದ್ದರು. ಎಂಗ್ರೋ ಇಂಧನ, ಕೃಷಿ, ಪೆಟ್ರೋಕೆಮಿಕಲ್ಸ್ ಹಾಗೂ ದೂರಸಂಪರ್ಕದಲ್ಲಿ ಹೂಡಿಕೆ ಮಾಡುವ ಸಂಸ್ಥೆಯಾಗಿದೆ. ಇದು 2022ರ ಕೊನೆಯಲ್ಲಿ 350 ಶತಕೋಟಿ ರೂ. ಆದಾಯವನ್ನು ಘೋಷಿಸಿದೆ.

ನಾಪತ್ತೆಯಾಗಿರುವ ಜಲಾಂತರ್ಗಾಮಿಯಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕನನ್ನು ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಎಂದು ಗುರುತಿಸಲಾಗಿದೆ. ಇದೀಗ ಅಮೆರಿಕ ಹಾಗೂ ಕೆನಡಾದ ಹಡಗುಗಳು ಮಾತ್ರವಲ್ಲದೇ ವಿಮಾನಗಳು ಕೂಡಾ ಜಲಾಂತರ್ಗಾಮಿ ಹುಡುಕಾಟಕ್ಕೆ ಇಳಿದಿವೆ.

About Author

Leave a Reply

Your email address will not be published. Required fields are marked *

You may have missed