ಧೋನಿಯನ್ನೇ ಮೀರಿಸೋ ಈ ಬಂಗಾರದ ಜಿಂಕೆಯ ಡೈಲಿ ಆದಾಯ ಎಷ್ಟು ಗೊತ್ತಾ?

ಭಾರತದ ಮೊಟ್ಟಮೊದಲ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಪಿ ವಿ ಸಿಂಧು ಆಸ್ತಿ ಎಷ್ಟು ಗೊತ್ತಾ ? ಬಂಗಾರದ ಬಾಲೆಯ ದಿನದ ಆದಾಯ ಎಷ್ಟು ಗೊತ್ತಾ ? ಧೋನಿಯನ್ನೂ ಮೀರಿಸೋ ಈಕೆಯ ಸಾಮರ್ಥ್ಯ ಎಷ್ಟು ಗೊತ್ತಾ ? ಇಲ್ಲಿದೆ ಸ್ಪೆಷಲ್ ಸ್ಟೋರಿ.
ನಿನ್ನೆಯಷ್ಟೇ ವಿಶ್ವಚಾಂಪಿಯನ್​ಶಿಪ್ ಗೆದ್ದು ಭಾರತಾಂಬೆಯ ಹಣೆಗೆ ಬಂಗಾರದ ಸಿಂಧೂರ ಇಟ್ಟಿರೋ ಹೈದ್ರಾಬಾದ್ ಬಾಲೆಯ ಬಗ್ಗೆ ಇಡೀ ಭಾರತವೇ ಈಗ ಕುತೂಹಲದಿಂದ ಕಣ್ಣರಳಿಸಿದೆ. ಈ ಮಧ್ಯೆ, ಸಿಂಧು ಬಗ್ಗೆ ಸಾಕಷ್ಟು ಕಥೆಗಳು ಹೊರಬೀಳ್ತಿವೆ. ಜಾಹೀರಾತುಗಳ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿಯನ್ನೇ ಹಿಂದಿಕ್ಕಿದ್ದಾರೆ. ಈ ಸಾಲಿನಲ್ಲಿ ಈಕೆಗಿನ್ನು ಸವಾಲಾಗಿರುವುದು ಟೀಂ ಇಂಡಿಯಾದ ಹಾಲಿ ಆಟಗಾರ ವಿರಾಟ್ ಕೊಹ್ಲಿ ಮಾತ್ರ.
ಸ್ಪೋರ್ಟ್ ಮ್ಯಾನೇಜಗ್’ಮೆಂಟ್’ನ ಫರ್ಮ್ ಪ್ರಕಾರ ಪಿ ವಿ ಸಿಂಧು ಪ್ರಸ್ತುತ ದಿನವೊಂದಕ್ಕೆ 1 ರಿಂದ 1.25 ಕೋಟಿ ಗಳಿಸುತ್ತಿದ್ದಾರಂತೆ. ಇನ್ನು ನಂ. 1 ಸ್ಥಾನದಲ್ಲಿರುವ ಕೊಹ್ಲಿ ಒಂದು ದಿನದಲ್ಲಿ 2 ಕೋಟಿ ಗಳಿಸುತ್ತಿದ್ದಾರೆ. ಹೀಗೆ ಈ ಸಾಲಿನಲ್ಲಿ ಧೋನಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ನಾಲ್ಕನೇ ಸ್ಥಾನವನ್ನು ಸೈನಾ ಅಲಂಕರಿಸಿದರೆ, ಐದನೇ ಸ್ಥಾನದಲ್ಲಿ ಸಾನಿಯಾ ಮಿರ್ಜಾ ಇದ್ದಾರೆ.
ರಿಯೋ ಒಲಿಂಪಿಕ್ಸ್’ನಲ್ಲಿ ರಜತ ಪದಕ ಗೆದ್ದ ಬಳಿಕ ಸಿಂಧು ಬೇಡಿಕೆ ಗಣನೀಯವಾಗಿ ಹೆಚ್ಚಿದ್ದು, ಸುಮಾರು 15 ರಿಂದ 20 ಲಕ್ಷ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಕಳೆದ ಕೆಲ ತಿಂಗಳುಗಳಿಂದ ಸಿಂಧು ಸುಮಾರು 30 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಸೈನ್​ ಮಾಡ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ, 3 ವರ್ಷದ 50 ಕೋಟಿ ಮೌಲ್ಯದ ಒಪ್ಪಂದವೊಂದಕ್ಕೆ ಸಿಂಧೂ ಸಹಿ ಹಾಕಿದ್ದಾರೆ.
ಅಷ್ಟೇ ಅಲ್ಲ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಅವರು ಫೋಬ್ಸ್‌ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೀಟ್‌ಗಳ ಪಟ್ಟಿ ಯಲ್ಲಿ ಸ್ಥಾನ ಗಳಿಸಿದ್ದಾರೆ. ಹಿಂದಿನ 12 ತಿಂಗಳ ಅವಧಿಯಲ್ಲಿ (ಜೂನ್‌ 2018ರಿಂದ ಜೂನ್‌ 2019) ಬಹುಮಾನ ಮೊತ್ತ, ಬೋನಸ್‌, ವೇತನ ಮತ್ತು ಜಾಹೀರಾತು ಮೂಲಗಳಿಂದ ಆಟಗಾರ್ತಿಯರು ಗಳಿಸಿದ ಆದಾಯದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
24 ವರ್ಷ ವಯಸ್ಸಿನ ಸಿಂಧು, ಒಂದು ವರ್ಷದಲ್ಲಿ ಒಟ್ಟು 39.9 ಕೋಟಿ ಆದಾಯ ಗಳಿಸಿ ಪಟ್ಟಿಯಲ್ಲಿ ಜಂಟಿ 13ನೇ ಸ್ಥಾನ ಪಡೆದಿದ್ದಾರೆ. ಜಾಹೀರಾತು ಮೂಲಗಳಿಂದ ಅವರ ಖಾತೆಗೆ 35.5 ಕೋಟಿ ಸೇರ್ಪಡೆಯಾಗಿದೆ. ಅವರು ಗಳಿ ಸಿದ ಬಹುಮಾನ ಮೊತ್ತ 4.4 ಕೋಟಿ.

ಅತೀ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮಹಿಳಾ ಅಥ್ಲೀಟ್‌ ಎಂಬ ಹಿರಿಮೆಯನ್ನೂ ಸಿಂಧು ಹೊಂದಿದ್ದಾರೆ. ಅವರು ಬ್ರಿಜ್‌ಸ್ಟೋನ್‌, ಜೆಬಿಎಲ್‌, ಗ್ಯಾಟೊರೇಡ್‌, ಪ್ಯಾನ ಸೋನಿಕ್‌ ಸೇರಿದಂತೆ ಇತರ ಪ್ರಮುಖ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈಗ ಬಂಗಾರ ಗೆದ್ಮೇಲೆ ಈಕೆ ಆದಾಯ ಡಬಲ್ ಆಗೋ ನಿರೀಕ್ಷೆ ಇದೆ.

Add Comment