ತಮಿಳುನಾಡಿನಲ್ಲಿ ನಟಿ ಖುಷ್ಬೂ ಕಾರು ಅಪಘಾತ

ದಕ್ಷಿಣಭಾರತದ ಖ್ಯಾತ ಸುರಸುಂದರಿ ನಟಿ ಖುಷ್ಬೂ ಸುಂದರ್ ಅವರು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಸ್ಟಾರ್ ನಾಯಕಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.‌

ಆದರೆ ಇಂದು ತಮಿಳುನಾಡಿನ ಮೇಲ್ಮರುವಾತ್ತೂರ್ ನಲ್ಲಿ ನಡೆಯುತ್ತಿದ್ದ ಬಿಜೆಪಿಯ ವೇಲ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಟಿ ಖುಷ್ಬೂ ಸುಂದರ್ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಈ ವೇಳೆ ರಸ್ತೆಯಲ್ಲಿ ಎದುರಿಗೆ ಜೋರಾಗಿ ಬಂದ ಟ್ಯಾಂಕರ್ ಖುಷ್ಬೂ ಅವರ ಕಾರಿಗೆ ಗುದ್ದಿದೆ.  ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಹಿಂಬಾಗ ನುಜ್ಜುಗಜ್ಜಾಗಿದೆ.  ಆದರೆ ಅದೃಷ್ಟವಶಾತ್ ಖುಷ್ಬೂ ಸುಂದರ್ ಅವರು ಅಪಾಯದಿಂದ ಪಾರಾಗಿದ್ದಾರೆ.

ಬಳಿಕ ಈ ಬಗ್ಗೆ ಹೇಳಿಕೆ ನೀಡಿದ ನಟಿ ಖುಷ್ಬೂ ಸುಂದರ್ ಇಂದು ನನ್ನ ಗಂಡ ಶ್ರೀರಾಘವೇಂದ್ರಸ್ವಾಮಿಗೆ ನನ್ನ ಪರವಾಗಿ ಹರಕೆ ಹೊತ್ತಿದ್ದರಿಂದ ನಾನು ಬದುಕಿದೆ. ಆದರೆ ಈ ಅಪಘಾತಕ್ಕೆ ಟ್ಯಾಂಕರ್ ಚಾಲಕನ ಅತಿ ವೇಗದ ಚಾಲನೆಯೇ ಕಾರಣ ಎಂದು ದೂರಿದರು.

ಬಳಿಕ ಕಡಲೂರಿಗೆ ತೆರಳಿ ನಟಿ ಖುಷ್ಬೂ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಆದಾಗ್ಯೂ ಇತ್ತ ಮೇಲ್ಮರುವಾತ್ತೂರ್ ನಲ್ಲಿ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕೆ ಟಿವಿ ನ್ಯೂಸ್ ಮೇಲ್ಮರುವಾತ್ತೂರ್

Add Comment