ದೆಹಲಿಯಲ್ಲಿ ಮಾಸ್ಕ್ ಧರಿಸದೆ ಓಡಾಡಿದರೆ 2 ಸಾವಿರ ರೂ. ದಂಡ!

 ದೆಹಲಿ ರಾಜ್ಯದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವರಿಗೆ ಬರೋಬ್ಬರಿ 2 ಸಾವಿರ ರೂ. ದಂಡ ವಿಧಿಸಲು ತೀರ್ಮಾನಿಸಿದೆ.

ಏಕೆಂದರೆ ದೆಹಲಿ ರಾಜ್ಯದಲ್ಲಿ ಕೊರೊನಾ ಸೋಂಕು ದಿನವೊಂದಕ್ಕೆ 7 ರಿಂದ 8 ಸಾವಿರ ಜನರಿಗೆ ತಗುಲುತ್ತಿದೆ. ಅಲ್ಲದೆ ಪ್ರತಿದಿನ 130ಕ್ಕೂ ಹೆಚ್ಚಿನ ಜನರನ್ನು ಕೊರೊನಾ ಸೋಂಕು ಕೊಲ್ಲುತ್ತಿದೆ.

ಆದರೆ ಈ ಮುನ್ನ ದೆಹಲಿಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೊನಾ ವೈರಸ್ ಸೋಂಕು ಇದೀಗ 2ನೇ ಬಾರಿ ಶರವೇಗದಲ್ಲಿ ಹರಡಿ ಪ್ರತಿ ದಿನ ನೂರಾರು ಜನರ ಸಾವಿಗೆ ಕಾರಣವಾಗಿದೆ.

ಇದರಿಂದ ಅನಿವಾರ್ಯವಾಗಿ ದೆಹಲಿ ರಾಜ್ಯದಲ್ಲಿ ಮಾಸ್ಕ್

ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವರಿಗೆ ಬರೋಬ್ಬರಿ 2 ಸಾವಿರ ರೂಪಾಯಿ ದಂಡ ವಿಧಿಸಲು ಸಿಎಂ ಅರವಿಂದ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.

ಕೆ ಟಿವಿ ನ್ಯೂಸ್ ದೆಹಲಿ

 

 

 

 

 

Add Comment