ಡಿ.5ರ ಕರ್ನಾಟಕ ಬಂದ್: ಕುತೂಹಲ ಕೆರಳಿಸಿದ ಕರವೇ ಬಣಗಳ ನಿಲುವು

ಡಿಸೆಂಬರ್ 5 ರಂದು ಮರಾಠ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡುವ ರಾಜ್ಯಸರ್ಕಾರದ ನಿರ್ಧಾರ ಖಂಡಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳ ಒಕ್ಕೂಟದ ನಿರ್ಧಾರವನ್ನು ಸದ್ಯಕ್ಕೆ ಬೆಂಬಲಿಸದಿರಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.

ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು “ಕೊರೊನಾ ಸೋಂಕಿನ ಕಾಲದಲ್ಲಿ ನಾಗರಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಡಿಸೆಂಬರ್ 5 ರಂದು ಬಂದ್ ನಡೆಸುವ ನಿರ್ಧಾರಕ್ಕೆ ಕರವೇ ಈಗಲೇ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಇದೇ ವೇಳೆ ಮತ್ತೊಂದು ಕರವೇ ಬಣದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸಹ ಇಂದಿನ ಬೆಂಗಳೂರಿನ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಗೈರುಹಾಜರಾಗಿದ್ದರು.

ಆದ್ದರಿಂದ ಡಿಸೆಂಬರ್ 5 ರ ಕರ್ನಾಟಕ ಬಂದ್ ಬಗ್ಗೆ ಈ ಎರಡೂ ಕರವೇ ಸಂಘಟನೆಗಳ ನಿಲುವು ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.

                          ಕೆ ಟಿವಿ ನ್ಯೂಸ್ ಬೆಂಗಳೂರು

Add Comment