ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಕೇಸ್: ಆರೋಪಿ ಸಂಪತ್ ರಾಜ್ ಗೆ ನ.24ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರಿನ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಮತ್ತು ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಬಿಎಂಪಿಯ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ನವೆಂಬರ್ 24 ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೈಕೋರ್ಟ್ ಆದೇಶಿಸಿದೆ.

ಇಂದು ಸಿಸಿಬಿ ಪೊಲೀಸರ ವಶದಲ್ಲಿರುವ ಡಿ.ಜೆ.ಹಳ್ಳಿ ವಾರ್ಡ್ ಕಾರ್ಪೊರೇಟರ್ ಸಂಪತ್ ರಾಜ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ಜಾಮೀನು ಅರ್ಜಿ ಪರ ವಕೀಲ ಸಿ.ವಿ.ನಾಗೇಶ್ ಅವರ ವಾದವನ್ನು ಆಲಿಸಿತು. ಬಳಿಕ ಸಿಸಿಬಿ ಪೊಲೀಸರ ಪರ ವಕೀಲರು ಪ್ರತಿವಾದ ಮಂಡಿಸಿ ಆರೋಪಿ ಸಂಪತ್ ರಾಜ್ ಅವರನ್ನು ಇನ್ನಷ್ಟು ದಿನಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಬೇಕಿರುವುದರಿಂದ ಜಾಮೀನು ಕೊಡಬಾರದೆಂದು ವಾದಿಸಿದರು.

ಬಳಿಕ ಹೈಕೋರ್ಟ್ ವಾದ-ಪ್ರತಿವಾದ ಆಲಿಸಿ ಆರೋಪಿ ಸಂಪತ್ ರಾಜ್ ಮೇಲೆ ಗಂಭೀರ ಆರೋಪಗಳಿರುವುದನ್ನು ಸಿಸಿಬಿಯ ಜಾರ್ಜ್ ಶೀಟ್ ತೋರಿಸುತ್ತಿದೆ.  ಆದ್ದರಿಂದ ಆರೋಪಿ ಸಂಪತ್ ರಾಜ್ ಅವರಿಗೆ ನವೆಂಬರ್ 24 ರವರೆಗೆ ನ್ಯಾಯಾಂಗ ಬಂಧನದಲ್ಲಿರಬೇಕೆಂದು ಆದೇಶಿಸಿತು.

ಇದೇ ವೇಳೆ ನವೆಂಬರ್ 22 ಮತ್ತು ನವೆಂಬರ್ 23 ರಂದು ಎರಡು ದಿನಗಳ ಕಾಲ ಎನ್.ಐ.ಎ ಜೈಲಿನಲ್ಲಿ ಸಂಪತ್ ರಾಜ್ ಅವರನ್ನು ವಿಚಾರಣೆ ನಡೆಸಬಹುದು ಎಂದು ಆದೇಶಿಸಿತು.

  •                            ಕೆ ಟಿವಿ ನ್ಯೂಸ್ ಬೆಂಗಳೂರು

Add Comment