ಅಕ್ಟೋಬರ್​ನಲ್ಲಿ ಭಾರತ – ಪಾಕಿಸ್ತಾನ ಯುದ್ಧ?

1 Star2 Stars3 Stars4 Stars5 Stars (No Ratings Yet)
Loading...

ಬರಗೆಟ್ಟ ಪಾಕಿಸ್ತಾನ ಯುದ್ಧೋನ್ಮಾದದಲ್ಲಿದೆ. ಮೋದಿ ಏನ್ಮಾಡ್ತಾರೋ ಅನ್ನೋ ಭೀತಿಯಲ್ಲಿ ಕ್ಷಣಕ್ಷಣವನ್ನೂ ದೂಡುತ್ತಿದೆ. ಅಲ್ಲಿನ ರಾಜಕಾರಣಿಗಳು ಅದೆಷ್ಟು ಪ್ಯಾನಿಕ್ ಆಗಿದ್ದಾರೆಂದ್ರೆ, ಮಾತೆತ್ತಿದ್ರೆ ಯುದ್ಧ ಅಂತಿದ್ದಾರೆ. ಇದೀಗ ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ನೇರವಾಗಿಯೇ ರಣಕಹಳೆ ಮೊಳಗಿಸಿದ್ದಾರೆ
ಕಾಶ್ಮೀರಕ್ಕಾಗಿ ಯುದ್ಧ ಅನಿವಾರ್ಯ. ಕಾಶ್ಮೀರಕ್ಕಾಗಿ ನಾವು ಕೊನೆಯ ಪ್ರಯತ್ನ ಮಾಡ್ತೇವೆ. ಮೊಹರಂ ಬಳಿಕ ಏನ್ ಬೇಕಾದ್ರೂ ಆಗಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಉಭಯ ದೇಶಗಳ ಮಧ್ಯೆ ಯುದ್ಧ ಅನಿವಾರ್ಯವಾಗಿದ್ದು, ಅಕ್ಟೋಬರ್ -ನವೆಂಬರ್ ನಲ್ಲಿ ಯುದ್ಧ ನಡೆಯಲಿದೆ ಎಂದು ಶೇಖ್ ರಶೀದ್ ಹೇಳಿದ್ದಾರೆ. ಊಟಕ್ಕೂ ಗತಿ ಇಲ್ದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲೆಯಾಗಿ ನಿಂತಿರೋ ಪಾಕಿಸ್ತಾನ, ಮತ್ತೊಂದು ಪಾಪ ಕಾರ್ಯಕ್ಕೆ ಕೈ ಹಾಕಿದಂತಿದೆ.
ಈಗಾಗಲೇ ಭಾರತದ ಗಡಿಯುದ್ಧಕ್ಕೂ ಸ್ಪೆಷಲ್ ಕಮಾಂಡೋಸ್​ಗಳನ್ನು ನಿಯೋಜಿಸಿರೋ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸ್ತಿದೆ. ಈ ವೇಳೆ ಉಗ್ರರನ್ನು ತಳ್ಳಲು ಯತ್ನಿಸ್ತಿದೆ. ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ, ಭಾರತ ಈವರೆಗೆ 10ಕ್ಕೂ ಹೆಚ್ಚು ಪಾಕಿಸ್ತಾನದ ಕಮಾಂಡೋಗಳನ್ನು ಹೊಡೆದುರುಳಿಸಿದೆ. ಇದೀಗ ಯುದ್ಧದ ಮಾತನಾಡ್ತಿರೋ ಪಾಕಿಸ್ತಾನದ ದುರಂಹಕಾರ ಪ್ರದರ್ಶಿಸುವಂತಿದೆ.
ಆದರೆ. ಪರಿಸ್ಥಿತಿ ಈ ಬಾರಿ ಎಂದಿನಂತಿಲ್ಲ. ಇಲ್ಲಿ ಮೋದಿ-ಶಾ-ರಾಜನಾಥ್ ಜೋಡಿ ಯಾವ ನಿರ್ಧಾರ ತೆಗೆದುಕೊಳ್ಳೋದಕ್ಕೂ ಹಿಂಜರಿಯೋದಿಲ್ಲ ಅನ್ನೋದು ಜಗತ್ತಿಗೇ ಗೊತ್ತು. ಕೇವಲ ಬಾಂಬ್ ದಾಳಿ ನಡೆಸಿದ್ದಕ್ಕೇ ಪಾಕಿಸ್ತಾನದ ಎದೆಯಲ್ಲಿ ಬಾಂಬ್ ಹಾಕಿ ಬಂದಿತ್ತು ನಮ್ಮ ವಾಯುಪಡೆ. ಅಂತಹದ್ರಲ್ಲಿ, ಯುದ್ಧ ಘೋಷಣೆ ಮಾಡಿದ್ರೆ, ಮೋದಿ ಸುಮ್ಮನೇ ಬಿಡ್ತಾರಾ ? ಪಾಕ್ ಸರ್ವನಾಶವಾಗೋದು ಫಿಕ್ಸ್ !

Add Comment