BREAKING NEWS : ಪಾಕ್ ಮೇಲೆ ಮತ್ತೆ ವಾಯುದಾಳಿ – ನಾಲ್ವರು ಉಡೀಸ್

ಭಾರತದ ಮೇಲೆ ದಾಳಿ ಮಾಡೋ ಪಾಕಿಸ್ತಾನದ ದೊಡ್ಡ ಯತ್ನವೊಂದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ನಾಲ್ಕಕ್ಕೂ ಹೆಚ್ಚು ಉಗ್ರರೊಂದಿಗೆ ಪಾಕಿಸ್ತಾನದ ಬ್ಯಾಟ್ ಪಡೆ ಠಿಕಾಣಿ ಹೂಡಿತ್ತು. ಕೆಲ ಕಾಲ ಗುಂಡಿನ ದಾಳಿಯನ್ನೂ ಭಾರತದ ಭದ್ರತಾಪಡೆಗಳ ಮೇಲೆ ನಡೆಸಿತ್ತು.
ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಭಾರತದ ವಾಯುಪಡೆ, ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಪಾಕಿಸ್ತಾನದ ಸೇನಾ ಶಿಬಿರವೊಂದು ಧ್ವಂಸವಾಗಿದೆ. ಎಷ್ಟು ಜನ ಪಾಪಿ ಪಾಕಿಗಳು ಬಲಿಯಾಗಿದ್ದಾರೋ ಗೊತ್ತಿಲ್ಲ. ಆದರೆ, ನಾಲ್ಕು ಜನರ ಶವ ಪತ್ತೆಯಾಗಿರೋ ಫೋಟೋವೊಂದನ್ನು ಭಾರತೀಯ ಸೇನೆ ಬಹಿರಂಗಪಡಿಸಿದೆ. ಪಾಕಿಸ್ತಾನದದ ಕುತಂತ್ರಕ್ಕೆ ಸಾಕ್ಷಿಯಾಗಿ ಜಗತ್ತಿನ ಮುಂದೆ ಆ ಫೋಟೋಗಳನ್ನಿಟ್ಟು ಪಾಕಿಸ್ತಾನವನ್ನು ಬೆತ್ತಲು ಮಾಡಿದೆ.

Add Comment