ಶಾಂಭವಿ ನದಿಯಲ್ಲಿ ಈಜಾಡುವಾಗ 3 ಯುವಕರು,ಓರ್ವ ಯುವತಿ ನೀರುಪಾಲು

ಮದುವೆ ಸಮಾರಂಭಕ್ಕೆ ಬಂದಿದ್ದವರು ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಅವಘಡ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದರೆ ತಾಲ್ಲೂಕಿನಲ್ಲಿ ನಡೆದಿದೆ.
ಮೂಡಬಿದರೆ ತಾಲ್ಲೂಕಿನ ತುಲೆಮಗೇರ್ ಎಂಬಲ್ಲಿ ಶಾಂಭವಿ ನದಿಯಲ್ಲಿ ಹರಿಯುತ್ತಿರುವಾಗ ಈಜಲು ಹೋಗಿ ಮೂವರು ಯುವಕರು ಮತ್ತು ಓರ್ವ ಯುವತಿ ನೀರುಪಾಲಾಗಿದ್ದಾರೆ.
ಪಾಲಡ್ಕ ಗ್ರಾ.ಪಂ‌ ವ್ಯಾಪ್ತಿಯ ಕಡಂದಲೆಯ ಗ್ರಾಮದಲ್ಲಿ ಮದುವೆಗೆಂದು ಬಂದಿದ್ದ ಯುವಕ,ಯುವತಿಯರು 4 ದಿನ ಅಲ್ಲೇ ವಾಸವಾಗಿದ್ದರು. ಮಂಗಳವಾರ ಮಧ್ಯಾಹ್ನ ಶಾಂಭವಿ ನದಿಯು ಹರಿಯುತ್ತಿದ್ದ ತುಲೆಮಗೇರ್ ಎಂಬಲ್ಲಿ ನೀರಿಗಿಳಿದು ಈಜಾಡುತ್ತಿರುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮೂಡುಶೆಡ್ಡೆಯ ನಿಖಿಲ್(18),ಅರ್ಶಿತಾ(20),ವೇಣೂರಿನ ಸುಭಾಷ್(19),
ಬಜ್ಪೆ ಪರಾರದ ರವಿ(20) ಸಾವನ್ನಪ್ಪಿದ್ದಾರೆ.
ಈಗಾಗಲೇ ಮೂಡಬಿದರೆ ಪೊಲೀಸರು ಇಬ್ಬರ ಶವಗಳನ್ನು ಶಾಂಭವಿ ನದಿಯಿಂದ ಮೇಲೆಕ್ಕೆತ್ತಿದ್ದಾರೆ. ಅದರೆ ಇನ್ನಿಬ್ಬರು ಶವಗಳಿಗಾಗಿ ನದಿಯಲ್ಲಿ ಮುಳುಗು ತಜ್ಞರು ಶೋಧಕಾರ್ಯ ನಡೆಸುತ್ತಿದ್ದಾರೆ.
ಕೆ ಟಿವಿ ನ್ಯೂಸ್ ಮೂಡಬಿದರೆ

Add Comment