ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ವ್ಯಾಕ್ಸಿನ್ ಗಳು ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕರ್ನಾಟಕದ ಸಿಎಂ ಯಡಿಯೂರಪ್ಪ,ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ,ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್,ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೊರೊನಾ ಸೋಂಕು ಹೆಚ್ಚಾಗಿರುವ
8 ರಾಜ್ಯಗಳ ಸಿಎಂಗಳ ಜೊತೆ ವೀಡಿಯೋ ಕಾನ್ ಫೆರೆನ್ಸ್ ನಡೆಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ “ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಸೋಂಕಿನ ಎರಡನೇ ಮತ್ತು ಮೂರನೇ ಅಲೆ ಎದ್ದಿದೆ. ಇದೇ ವೇಳೆ ಕೊರೊನಾಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವ್ಯಾಕ್ಸಿನ್ ಬಳಕೆಗೆ ಮಾರುಕಟ್ಟೆಗೆ ಬರಲು ಸಜ್ಜಾಗಿವೆ. ಆದರೆ ಸದ್ಯ ದೇಶದಲ್ಲಿ ಕೊರೊನಾ ಸೋಂಕಿನ ಪಾಸಿಟಿವ್ ಪ್ರಮಾಣ ಜನಸಂಖ್ಯೆಯ ಶೇಕಡಾ 5 ರಷ್ಟಕ್ಕಿಂತ ಕಡಿಮೆಯಾಗಬೇಕು ಮತ್ತು ಸಾವಿನ ಪ್ರಮಾಣ ಜನಸಂಖ್ಯೆಯ ಶೇಕಡಾ 1 ಕ್ಕಿಂತ ಕಡಿಮೆ ಪ್ರಮಾಣದಲ್ಲಿರುವಂತೆ ಮುಂಜಾಗ್ರತೆ ವಹಿಸಿ ಎಂದು 8 ರಾಜ್ಯಗಳ ಸಿಎಂಗಳಿಗೆ ಕರೆ ನೀಡಿದರು.
ಇದೇ ವೇಳೆ ಕೊರೊನಾ ಲಸಿಕೆ ಬರುವ ಮುನ್ನ ಕೋಲ್ಡ್ ಸ್ಟೋರೇಜ್ ಇರುವಂತೆ ನೋಡಿಕೊಳ್ಳಿ ಎಂದು ಪ್ರಧಾನಿ 8 ರಾಜ್ಯಗಳ ಸಿಎಂಗಳಿಗೆ ಎಚ್ಚರಿಸಿದರು.
ಕೆ ಟಿವಿ ನ್ಯೂಸ್ ನವದೆಹಲಿ