ಐಎಂಎ ಬಹುಕೋಟಿ ಹಗರಣ-ಬಂಧಿತ ರೋಶನ್ ಬೇಗ್ ನ್ಯಾಯಾಂಗ ಬಂಧನದ ಅವಧಿ 3 ದಿನ ವಿಸ್ತರಣೆ

ಐಎಂಎ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐನಿಂದ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಶಾಸಕ ರೋಶನ್ ಬೇಗ್ ಅವರಿಗೆ ನವೆಂಬರ್ 28ರ ಬೆಳಗ್ಗೆ 11 ಗಂಟೆಯವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಸಿಬಿಐ ವಿಶೇಷ ಕೋರ್ಟ್ ಆದೇಶಿಸಿದೆ.
ಬುಧವಾರ ಸಂಜೆ ಬೆಂಗಳೂರಿನ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶೆ ಮಂಜುಳಾ ಇಟ್ಟಿಮನಿ ಅವರು ಐಎಂಎ ಸಂಸ್ಥೆಯು ಹೂಡಿಕೆದಾರರ ಬಹುಕೋಟಿ ಹೂಡಿಕೆಯನ್ನು ಕಬಳಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ರೋಶನ್ ಬೇಗ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೂ 3 ದಿನಗಳವರೆಗೆ ವಿಸ್ತರಿಸಿ ಆದೇಶಿಸಿದರು.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment