ಫುಟ್ಬಾಲ್ ದಂತಕಥೆ ಡೀಗೊ ಮರಡೊನಾ ನಿಧನ

ಅರ್ಜೆಂಟೀನಾ ತಂಡಕ್ಕೆ ವಿಶ್ವಕಪ್ ಫುಟ್ಬಾಲ್ ಪ್ರಶಸ್ತಿ ತಂದುಕೊಂಡಿದ್ದ ಮಾಜಿ ಫುಟ್ಬಾಲ್ ಆಟಗಾರ ಡೀಗೊ ಮರಡೋನಾ ಅವರು ಹೃದಯಾಘಾತದಿಂದ ಅರ್ಜೆಂಟೀನಾದ ಬ್ಯೂನೊಸ್ ಐರಿಸ್ ನಗರದಲ್ಲಿ ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
1986ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ನಲ್ಲಿ
ಅರ್ಜೆಂಟೀನಾ ನಾಯಕರಾಗಿದ್ದ ಡೀಗೊ ಮರಡೋನಾ 2 ಗೋಲು ಹೊಡೆದು ಇಂಗ್ಲೆಂಡ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಅರ್ಜೆಂಟೀನಾ ವಿಶ್ವಕಪ್ ಫುಟ್ ಬಾಲ್ ಪ್ರಶಸ್ತಿಯನ್ನು ಗೆಲ್ಲಲು ಕಾರಣವಾಗಿದ್ದರು‌. ನಂತರ 1994ರ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ಷಿಪ್ ವೇಳೆ ಡೋಪಿಂಗ್ ಕಾರಣ ಯಾವುದೇ ಪಂದ್ಯವಾಡದಂತೆ ನಿಷೇಧಕ್ಕೊಳಗಾಗಿದ್ದರು.
ಮೊದಲು 20 ವರ್ಷದೊಳಗಿನ ವಿಶ್ಬಕಪ್ ಫುಟ್ಬಾಲ್ ಪ್ರಶಸ್ತಿಯನ್ನು ಅರ್ಜೆಂಟೀನಾ ತಂಡಕ್ಕೆ ಗೆದ್ದುಕೊಟ್ಟಿದ್ದ ಮರಡೋನಾ 1986ರಲ್ಲಿ ಸೀನಿಯರ್ ತಂಡದ ನಾಯಕರಾಗಿ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ಷಿಪ್ ಅನ್ನು ಅರ್ಜೆಂಟೀನಾ ತಂಡಕ್ಕೆ ತಂದುಕೊಟ್ಟಿದ್ದರು.‌ ಬಳಿಕ 1989 ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲೂ ಅರ್ಜೆಂಟೀನಾ ಫೈನಲ್ ತಲುಪುವಂತೆ ಫುಟ್ಬಾಲ್ ಆಡಿದ್ದ ಮರಡೋನಾ ಅವರು 3-2 ಗೋಲುಗಳಿಂದ ಇಟಲಿ ವಿರುದ್ಧ ಅರ್ಜೆಂಟೀನಾ ಸೋಲು ಕಂಡು ರನ್ನರ್-ಅಪ್ ಪ್ರಶಸ್ತಿ ಸಿಗುವಂತೆ ಆಡಿದ್ದರು.‌
ಬಳಿಕ ನಿವೃತ್ತರಾದ ಬಳಿಕ 2008ರಿಂದ 2010 ರವರೆಗೆ ಅರ್ಜೆಂಟೀನಾ ಫುಟ್ಬಾಲ್ ತಂಡದ ಮ್ಯಾನೇಜರ್ ಆಗಿಯೂ ಮರಡೋನಾ ಕಾರ್ಯನಿರ್ವಹಿಸಿದ್ದರು.
ಇಂದು ನವೆಂಬರ್ 25 ರಂದು ಹೃದಯಾಘಾತದಿಂದ ನಿಧನರಾದ ಮರಡೋನಾ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಫುಟ್ಬಾಲ್ ದಂತಕಥೆ ಎನಿಸಿರುವ ಮರಡೋನಾ ಫುಟ್ಬಾಲ್ ಪ್ರಪಂಚದಲ್ಲಿ ಸಾರ್ವಕಾಲಿಕ ಆಟಗಾರ ಎಂದು ಖ್ಯಾತಿ ಪಡೆದಿದ್ದಾರೆ‌.
ಆದಕಾರಣ ಮಾಜಿ ಫುಟ್ಬಾಲ್ ಆಟಗಾರ ಡೀಗೊ‌ ಮರಡೋನಾ ಸಾವಿಗಾಗಿ ಅರ್ಜೆಂಟೀನಾ ದೇಶದಲ್ಲಿ 3 ದಿನಗಳ ಶೋಕಾಚರಣೆ ನಡೆಸಲು ಅಧ್ಯಕ್ಷ ಆಲ್ಬರ್ಟೊ ಫರ್ನಾಂಡಿಸ್ ಅವರು ಸರ್ಕಾರಿ ರಜೆ ಘೋಷಿಸಿದ್ದಾರೆ.
ಮರಡೋನಾ ಅಕಾಲಿಕ ನಿಧನಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ,ಭಾರತದ ಫುಟ್ಬಾಲ್ ತಂಡ,ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಐ.ಎಂ.ವಿಜಯನ್,ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್,ನಾಡಿಯಾ ಕಮನೆಸಿ,ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ,ಕಾಂಗ್ರೆಸ್ ನಾಯಕ ಶಶಿ ತರೂರ್,ವಿಶ್ವದ ನಂ.1 ಅಥ್ಲೀಟ್ ಉಸೇನ್ ಬೋಲ್ಟ್,ಮಾಜಿ ಕ್ರಿಕೆಟಿಗರಾದ ಸ್ಪಿನ್ನರ್ ಹರ್ಭಜನ್ ಸಿಂಗ್,ಸುರೇಶ್ ರೈನಾ,ಮಹೇಲಾ ಜಯವರ್ಧನೆ,ಕುಮಾರ್ ಸಂಗಾಕ್ಕರ್ ಟ್ವಿಟರ್ ಮೂಲಕ ಸಂತಾಪ ಸಲ್ಲಿಸಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment