ಜುಲೈ 15ರಿಂದ ಕಿಚ್ಚನ ಹೊಸ ಸಿನಿಮಾದ ಶೂಟಿಂಗ್ ಆರಂಭ

0

ಕಿಚ್ಚ ಸುದೀಪ್ ನಟನೆಯ ಮುಂದಿನ ಸಿನಿಮಾ ಯಾವಾಗ ಆರಂಭವಾಗಲಿದೆ ಎಂಬ ಕುತೂಹಲದಲ್ಲಿ ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಸುದೀಪ್ ನಟನೆಯ ಮುಂದಿನ ಸಿನಿಮಾದ ಶೂಟಿಂಗ್ ಚೆನ್ನೈನಲ್ಲಿ ನಡೆಯಲಿದ್ದು, ಜುಲೈ 15ರಿಂದ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದೆ. ಚೆನ್ನೈನ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸುದೀಪ್ ನಟನೆಯ ಹೊಸ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ ನಲ್ಲಿ ಸುದೀಪ್ ರಗಡ್ ಲುಕ್, ಖಡಕ್ ಡೈಲಾಗ್ ಹೇಳುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಆರ್ಭಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಕಳೆದೆರಡು ದಿನಗಳಿಂದ ಟೀಸರ್ ಟ್ರೆಂಡಿಂಗ್ ನಲ್ಲಿದೆ. ಕಿಚ್ಚನನ್ನು ರಕ್ತ ಸಿಕ್ತ ಅವತಾರ ನೋಡಿ ಕಿಚ್ಚ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ ಆಯಕ್ಷನ್ ಕಟ್ ಹೇಳ್ತಿದ್ದಾರೆಸದ್ಯ Kiccha 46 ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.

ದೊಡ್ಡ ಕಥೆದು ಚಿಕ್ಕ ಸಂದರ್ಭ ಹೇಳೋದಾ ಎಂದು ಹೇಳುವ ಡೈಲಾಗ್ ಮೂಲಕ ಕಿಚ್ಚ ಸುದೀಪ್ ರಾ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಒಬ್ಬನನ್ನ ಮುಗಿಸೋಕೆ ಅಷ್ಟು ಜನ ಹೋಗಿದ್ದಾರಾ. ಇನ್ನೂ ಅವನನ್ನ ಸಾಯಿಸಿಲ್ವ ಅನ್ನೋ ಕೆಡಿ ಖಡಕ್ ಮಾತಿಗೆ ಗನ್ ಹಿಡಿದು ಸುದೀಪ್ ರಗಡ್ ಆಗಿ ಎಂಟ್ರಿ ನೀಡಿದ್ದಾರೆ. ಯುದ್ಧ ನಾ ಹುಟ್ಟು ಹಾಕೋರನ್ನ ಕಂಡರೆ ಆಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡಿಹೋಗೋರನ್ನ ಕಂಡರೂ ನನಗೆ ಆಗಲ್ಲ. ಅಖಾಡಕ್ಕೆ ಇಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ಆ ರಕ್ತ ಸುರಿಸಿಕೊಂಡು ಓಡಿ ಹೋಗೋದನ್ನ ನೋಡೋನು ನಾನು. ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದ್ಯಾವುದು ಇರೋದಿಲ್ಲ ಎಂದು ಎದುರಾಳಿಗಳಿಗೆ ಸುದೀಪ್ ಖಡಕ್ ಡೈಲಾಗ್‌ನಿಂದ ವಾರ್ನಿಂಗ್ ನೀಡಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

About Author

Leave a Reply

Your email address will not be published. Required fields are marked *

You may have missed