ಕನ್ನಡಿಗ ಹುಡುಗ ತೆಗೆದ ಶತಮಾನದ ಸೆಲ್ಫಿ

1 Star2 Stars3 Stars4 Stars5 Stars (No Ratings Yet)
Loading...

ಹೌಡಿ ಮೋದಿ ಸಮಾವೇಶ ಇಡೀ ವಿಶ್ವದ ಗಮನ ಸೆಳೆದಿದೆ. ಒಂದೆಡೆ ಇದು ಮೋದಿ ಹಾಗೂ ಟ್ರಂಪ್ ನಡುವಿನ ಸ್ನೇಹವೆಷ್ಟು ಆಳವಿದೆ ಎಂಬುವುದನ್ನು ಬಹಿರಂಗಪಡಿಸಿದರೆ, ಅತ್ತ ಮೋದಿ ಭಾಷಣವೂ ಭಾರೀ ಸದ್ದು ಮಾಡಿದೆ. ಆದರೆ ಇವೆಲ್ಲದರ ನಡುವೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ಡಾಲರ್ ಸೆಲ್ಫೀ ಒಂದು ಭಾರೀ ಸೌಂಡ್ ಮಾಡುತ್ತಿದೆ. ಪುಟ್ಟ ಹುಡುಗನೊಬ್ಬ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಟ್ರಂಪ್ ಬಳಿ ಮನವಿ ಮಾಡಿಕೊಂಡು ತೆಗೆಸಿಕೊಂಡ ಸೆಲ್ಫೀ ಎಲ್ಲರ ಮನ ಗೆದ್ದಿದೆ. ಹೀಗಿರುವಾಗ ವಿಶ್ವದ ಗಮನಸೆಳೆದ ಬಾಲಕ ಕನ್ನಡಿಗ ಎಂಬುವುದು ಮತ್ತೊಂದು ಹೆಮ್ಮೆಯ ವಿಚಾರ.
ಹೌದು ವಿಶ್ವದ ದಿಗ್ಗಜರಾದ ಪ್ರಧಾನಿ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ರೊಂದಿಗೆ ನಿಂತು ಬಾಲಕನೊಬ್ಬ ತೆಗೆಸಿಕೊಂಡ ಸೆಲ್ಫಿ ಶತಮಾನದ ಸೆಲ್ಪೀ ಎನ್ನುವ ಮಟ್ಟಿಗೆ ಪ್ರಾಮುಖ್ಯತೆ ಪಡೆದಿದೆ. ಸದ್ಯ ಆ ಬಾಲಕ ಯಾರು ಎಂಬುವುದು ಬಹಿರಂಗವಾಗಿದೆ. 9 ವರ್ಷದ ಆ ಅದೃಷ್ಟವಂತ ಬಾಲಕ ಕರ್ನಾಟಕದ ಶಿರಸಿ ಮೂಲದ ಪ್ರಭಾಕರ ಹೆಗಡೆ, ಮೇಧಾ ಹೆಗಡೆ ದಂಪತಿಯ ಪುತ್ರ ಸಾತ್ವಿಕ್ ಹೆಗಡೆ.

ಭಾನುವಾರ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನಡೆಸಿಕೊಟ್ಟಿ ಹೈಸ್ಕೂಲ್ ಬಾಲಕ ಸಾತ್ವಿಕ್ ಬಳಿಕ ಮೋದಿ ಹಾಗೂ ಟ್ರಂಪ್ ಸಿಕ್ಕಾ ಸೆಲ್ಫಿಗೆ ವಿನಂತಿಸಿದ್ದ. ಇಬ್ಬರೂ ದಿಗ್ಗಜರು ಖುಷಿಖುಷಿಯಾಗಿಯೇ ಈತನ ಹೆಗಲ ಮೇಲೆ ಕೈ ಹಾಕಿ ಪೋಸ್ ಕೊಟ್ಟಿದ್ದು ಆ ವಿಡಿಯೋ ಹಾಗೂ ಸೆಲ್ಫಿ ಪೋಟೋ ಇದೀಗ ವೈರಲ್ ಆಗಿದೆ.

Add Comment