ಡಿಕೆಶಿ ಆಯ್ತು, ಈಗ ಪರಮೇಶ್ವರ್​ಗೆ ಐಟಿ ಶಾಕ್ – ಜೈಲು ಪಾಲಾಗ್ತಾರಾ ಮಾಜಿ ಡಿಸಿಎಂ?

 

ಐಟಿ ಕುಣಿಕೆಗೆ ಮತ್ತೊಬ್ಬ ಕಾಂಗ್ರೆಸ್​ ನಾಯಕ ಸಿಲುಕಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಈಗಾಗಲೇ ಜೈಲು ಪಾಲಾಗಿದ್ದಾರೆ. ಇದೀಗ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್​ಗೆ ಐಟಿ ಶಾಕ್ ತಟ್ಟಿದೆ. ಪರಮೇಶ್ವರ್​​ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ರೇಡ್ ನಡೆದಿದೆ. ತುಮಕೂರಿನ ಮೆಡಿಕಲ್​​​ ಕಾಲೇಜು, SSIT ಸೇರಿ ಎಲ್ಲ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10ಕ್ಕೂ ಹೆಚ್ಚು ಅಧಿಕಾರಿಗಳ ಪರಿಶೀಲನೆ ನಡೆಸ್ತಿದ್ದಾರೆ. ಸಿದ್ದಾರ್ಥ ತಾಂತ್ರಿಕ ಮಹಾ ವಿದ್ಯಾಲಯದ ಕಚೇರಿಯಲ್ಲಿ ದಾಖಲೆ ಶೋಧ ನಡೆಸಲಾಗ್ತಿದೆ. ಕಚೇರಿ ಬಾಗಿಲು ಮುಚ್ಚಿಸಿ ಸಿಬ್ಬಂದಿ ಕರೆಸಿ ಪರಿಶೀಲನೆ ನಡೆಸ್ತಿರೋ ಅಧಿಕಾರಿಗಳು, ಸಾಕಷ್ಟು ದಾಖಲೆಗಳನ್ನು ಕಲೆ ಹಾಕಿದ್ದಾರೆ.

Add Comment