BREAKING NEWS – IT ದಾಳಿ ಬೆನ್ನಲ್ಲೇ ಪರಮೇಶ್ವರ್ PA ಆತ್ಮಹತ್ಯೆ – ಏನಿದರ ರಹಸ್ಯ?

1 Star2 Stars3 Stars4 Stars5 Stars (No Ratings Yet)
Loading...

ಐಟಿ ದಾಳಿಗೆ ಒಳಗಾಗಿರೋ ಮಾಜಿ ಸಿಎಂ ಡಾ ಜಿ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐಟಿ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಯೂನಿವರ್ಸಿಟಿ ಕ್ಯಾಂಪಸ್​ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯಿ ಗ್ರೌಂಡ್​​ ಬಳಿ ಸ್ಯೂಸೈಡ್ ಮಾಡಿಕೊಂಡಿದ್ದಾನೆ.
ಪರಮೇಶ್ವರ್ ಬಳಿ ಟೈಪಿಸ್ಟ್ ಆಗಿ ಸೇರಿಕೊಂಡಿದ್ದ ರಮೇಶ್, ಐಟಿ ವಿಚಾರಣೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾನಂತೆ. ನಾನು ಬಡವ ನನ್ನ ಮನೆಯ ಮೇಲೆ ಐಟಿ ದಾಳಿ ಮಾಡಿದ್ದಾರೆ. ಐಟಿಯವರ ಪ್ರಶ್ನೆಗಳಿಗೆ ಉತ್ತರ ಕೊಡೋಕ್ಕಾಗಲ್ಲ. ನಾನು ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿ ಇದ್ದೇನೆ. ನಾನು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದಿದ್ದ ರಮೇಶ್, ಕೆಲ ಆಪ್ತರಿಗೆ ಕಾಲ್​ ಮಾಡಿ ಫೋನ್ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದ. ಇದೀಗ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪೊಲೀಸರಿಗೆ ರಮೇಶ್ ಶವ ಪತ್ತೆಯಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add Comment