ಭಾರತದ ಪ್ರತಿ ಟನ್ ನುಚ್ಚು ಅಕ್ಕಿಗೆ 22,127 ರೂ. ನೀಡಿ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಚೀನಾ

ಕೊರೊನಾ ವೈರಸ್ ತಾಯ್ನಾಡಾಗಿರುವ ಚೀನಾ ದೇಶದಲ್ಲಿ ಈಗ ಅಕ್ಕಿಯ ಬರ ಎದುರಾಗಿದೆ. ಅದಕ್ಕಾಗಿ ತನ್ನ ವೈರಿ ದೇಶವೆಂದು ಕರೆಯಲ್ಪಡುವ ಭಾರತದ ಸಹಾಯ ಕೇಳಿದೆ.
ಸದ್ಯ ಚೀನಾ ಈವರೆಗೆ ಥಾಯ್ಲೆಂಡ್,ವಿಯಟ್ನಾಂ,
ಮ್ಯಾನ್ಮಾರ್(ಬರ್ಮಾ),ಪಾಕಿಸ್ತಾನ ದೇಶಗಳಿಂದ ಅಕ್ಕಿಯನ್ನು ಚೀನಾ ಆಮದುಕೊಳ್ಳುತ್ತಿತ್ತು. 2008ರಿಂದ ಭಾರತದಿಂದ ಅಕ್ಕಿಯನ್ನು ಆಮದುಕೊಳ್ಳುತ್ತಿದ್ದ ಚೀನಾ 2018ರಲ್ಲಿ 974 ಟನ್ ಅಕ್ಕಿಯನ್ನು ಆಮದುಮಾಡಿಕೊಂಡಿತ್ತು. ಆದರೆ ಭಾರತ ಕಳಪೆ ಅಕ್ಕಿಯನ್ನು ಆಮದು ಮಾಡುತ್ತಿದೆ ಎಂದು ಹೇಳಿ ಚೀನಾ 2018 ರಿಂದ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. ಆದರೆ ಇದೀಗ ಚೀನಾಕ್ಕೆ ಅಕ್ಕಿ ರಫ್ತು ಮಾಡುತ್ತಿದ್ದ ದೇಶಗಳು ಪ್ರತಿ ಟನ್ ಅಕ್ಕಿಗೆ 30 ಡಾಲರ್ ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿವೆ. ಇದರಿಂದ ಚೀನಾ ಇದೀಗ ಭಾರತದಿಂದ ಬಾಸ್ಮತಿ ಅಕ್ಕಿ ಹೊರತುಪಡಿಸಿ ನುಚ್ಚು ಅಕ್ಕಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಪ್ರತಿ ಟನ್ ಅಕ್ಕಿಗೆ ಆಮದು ಮಾಡಿಕೊಳ್ಳಲು ಭಾರತಕ್ಕೆ 22,127 ರೂ. (300 ಡಾಲರ್) ನೀಡುತ್ತಿದೆ ಚೀನಾ. ನ್ಯೂಡಲ್ಸ್,ದೋಸೆ,ಇಡ್ಲಿ ತಯಾರಿಸಲು ಭಾರತದಿಂದ ನುಚ್ಚು ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತಿದೆ.
ಲಡಾಖ್ ಗಡಿ ವಿವಾದ-ಸಂಘರ್ಷವನ್ನು ಮರೆತಂತಿರುವ ಚೀನಾಕ್ಕೆ ಭಾರತ ಸಹ ಯಾವುದೇ ಕಿರಿಕ್ ಮಾಡದೆ ನುಚ್ಚು ಅಕ್ಕಿಯನ್ನು ರಫ್ತು ಮಾಡುತ್ತಿದೆ.
ಅಂದಹಾಗೆ ಭಾರತ ಇಡೀ ವಿಶ್ವದಲ್ಲೇ ಅಕ್ಕಿ ರಫ್ತು ಮಾಡುವ ನಂ.1 ದೇಶವೆನಿಸಿದೆ. ಆದರೆ ಪ್ರತಿ ವರ್ಷ 40 ಲಕ್ಷ ಟನ್ ಅಕ್ಕಿ ಆಮದು ಮಾಡಿಕೊಳ್ಳುವ ಚೀನಾ ವಿಶ್ವದ ನಂ.1 ಅಕ್ಕಿ ಆಮದು ಮಾಡಿಕೊಳ್ಳುವ ದೇಶವೆನಿಸಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment