‘ಬುರೇವಿ’ ಚಂಡಮಾರುತದ ಪರಿಣಾಮ- ಬೆಂಗಳೂರಲ್ಲಿ ಮುಂಜಾನೆಯಿಂದ ತುಂತುರು ಮಳೆ

ಮುಂಜಾನೆಯಿಂದ ಮೋಡ ಕವಿದ ವಾತಾವರಣ ಇದ್ದು, ‘ಬುರೇವಿ’ ಚಂಡಮಾರುತದ ಪರಿಣಾಮ ನಗರದಲ್ಲಿ ಡಿಸೆಂಬರ್ 5ರ ತನಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಶ್ರೀಲಂಕಾ ಮತ್ತು ತಮಿಳುನಾಡು ಭಾಗಕ್ಕೆ ಅಪ್ಪಳಿಸುವ ‘ಬುರೇವಿ’ ಚಂಡಮಾರುತ ಕರ್ನಾಟಕದ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲ ಎಂದಾದರೂ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯ ಮಳೆ ಜನರಿಗೆ ಕಿರಿ ಕಿರಿ ಉಂಟು ಮಾಡಿದೆ. ನಗರದ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ವಿದ್ಯಾಪೀಠ ಸರ್ಕಲ್, ಮೈಸೂರು ರಸ್ತೆ, ಬಸವನಗುಡಿ, ಎನ್. ಆರ್. ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳಗ್ಗೆ ತುಂತುರು ಮಳೆಯಾಗಿದೆ. ಆದರೆ, ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೆ.ಟಿವಿ ಕನ್ನಡ

Add Comment