ಬಂದ್ ಮಾಡೇ ಮಾಡ್ತೇವೆ – ವಾಟಾಳ್ ನಾಗರಾಜ್

ಯಡಿಯೂರಪ್ಪ ಸರ್ಕಾರ ಸ್ಥಾಪಿಸಿರುವ ಮರಾಠಿ ಪ್ರಾಧಿಕಾರ ವಿರೋಧಿಸಿ ಡಿ.5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ವಾಟಾಳ್ ನಾಗರಾಜ್ ಸೇರಿದಂತೆ ಇತರ ಕನ್ನಡ ಪರ ಸಂಘಟನೆಗಳ ಒಕ್ಕೂಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮರಾಠಿ ಪ್ರಾಧಿಕಾರ ರಚನೆ ಮಾಡಿದ ಸಂಧರ್ಭದಿಂದಲೂ ವಾಟಾಳ್ ನಾಗಾರಜ್ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಮರಾಠಿ ಪ್ರಾಧಿಕಾರವನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡೇ ಮಾಡ್ತೇವೆ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಕೆ.ಟಿವಿ ಕನ್ನಡ

 

Add Comment