ಸನ್ನಿ ಡಿಯೋಲ್ ಕೋವಿಡ್ ನಿಂದ ಗುಣವಾಗಲಿ ಎಂದು ಅಭಿಮಾನಿಗಳ ಪ್ರಾರ್ಥನೆ

ಖ್ಯಾತ ನಟ ಧರ್ಮೇಂದ್ರ ಅವರ ಪುತ್ರ ಬಾಲಿವುಡ್ ನಟ ಹಾಗೂ ಪಂಜಾಬ್ ಗುರುದಾಸಪುರದ ಬಿಜೆಪಿ ಎಂಪಿ ಸನ್ನಿ ಡಿಯೋಲ್‍ಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಈ ಸಂಧರ್ಭದಲ್ಲಿ “ನಾನು ಕೋವಿಡ್ ಪರೀಕ್ಷೆ ಮಾಡಿಸಿದ್ದು ನನಗೆ ಪಾಸಿಟಿವ್ ಬಂದಿದೆ ಹಾಗಾಗಿ ಐಸೋಲೇಶನ್ ನಲ್ಲಿದ್ದೇನೆ. ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಪ್ರತ್ಯೇಕವಾಗಿರಿ” ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ. ಅವರು ಶೀಘ್ರ ಗುಣವಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿ, ಶುಭ ಹಾರೈಸಿದ್ದಾರೆ.

ಕೆ.ಟಿವಿ ಕನ್ನಡ

Add Comment