BREAKING NEWS- ಡಿಕೆಶಿ ಮೇಲೆ ಸಿಬಿಐ ದಾಳಿ – ಇಡಿ ಬಿಟ್ರೂ ಸಿಬಿಐ ಬಿಡಲ್ವಾ ?

1 Star2 Stars3 Stars4 Stars5 Stars (No Ratings Yet)
Loading...

ಡಿ.ಕೆ.ಶಿವಕುಮಾರ್​ಗೆ ಸಿಬಿಐ ಸಂಕಷ್ಟ ಎದುರಾಗಿದೆ. ಐಟಿ, ಇಡಿ ದಾಳಿ ಬಳಿಕ, ಇದೀಗ ಸಿಬಿಐ ಡಿಕೆಶಿ ನಿವಾಸದ ಮೇಲೆ ದಾಳಿ ನಡೆಸಿದೆ. ದೆಹಲಿಯ ಸಫ್ದರ್​ಜಂಗ್​ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಮುಗಿಬಿದ್ದಿದ್ದಾರೆ. ಡಿಕೆಶಿ ಆಪ್ತ ಶರ್ಮಾ ಟ್ರಾವೆಲ್ಸ್​ನ ಮಾಲೀಕ ಸುನಿಲ್ ಶರ್ಮಾ ನಿವಾಸದಲ್ಲೂ ಸಿಬಿಐ ಅಧಿಕಾರಿಗಳು ಶೋಧ ನಡೆಸ್ತಿದ್ದಾರೆ.
ತಿಹಾರ್ ಜೈಲು ಪಾಲಾಗಿರೋ ಡಿಕೆಶಿಗೆ ಇದೀಗ ಸಿಬಿಐ ಸಂಕಷ್ಟ ಶುರುವಾಗಿದೆ. ಐಟಿ ದಾಳಿಯಾದ ಬಳಿಕ ಈ ಫ್ಲಾಟ್​ ಡಿಕೆಶಿ ಪರ್ಚೇಸ್ ಮಾಡಿದ್ದರು ಎನ್ನಲಾಗ್ತಿದೆ. ಬಳ್ಳಾರಿಯಲ್ಲಿನ ಸೋಲಾರ್ ಪ್ಲಾಂಟ್​​ನಲ್ಲಿ ಬಂದಿರೋ ಹಣವನ್ನು ಈ ಫ್ಲಾಟ್​ ಪರ್ಚೇಸ್​ಗೆ ಡಿಕೆಶಿ ಬಳಸಿದ್ದರು ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗ್ತಿದೆ.

Add Comment