ಡಿ.5 ರ ಕರ್ನಾಟಕ ಬಂದ್ ಗೆ ಬೆಂಬಲ ನೀಡದಿರಲು‌ ಮೈಸೂರಿನ 15 ಸಂಘಟನೆಗಳ ನಿರ್ಧಾರ

ಮರಾಠ ಅಭಿವೃದ್ಡಿ ನಿಗಮ ಮಂಡಳಿ ಸ್ಥಾಪಿಸುವ ರಾಜ್ಯಸರ್ಕಾರದ ನಿರ್ಧಾರ ಖಂಡಿಸಿ ಡಿಸೆಂಬರ್ 5 ಶನಿವಾರದಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲಿಸದಿರಲು ಮೈಸೂರಿನ 15 ವಿವಿಧ ಸಂಘಟನೆಗಳು ತೀರ್ಮಾನಿಸಿವೆ.
ಮೈಸೂರು ಉದ್ಯಮ ಸಂಘಗಳ ಒಕ್ಕೂಟ,ಟ್ರಾವೆಲ್ಸ್ ಅಸೋಸೆಯೇಶನ್,ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ಜಿಲ್ಲಾ ಪ್ರವಾಸಿ ಬಸ್ ಮಾಲೀಕರ ಸಂಘ, ಕಲ್ಯಾಣ ಮಂಟಪ ಮಾಲೀಕರ ಸಂಘ ಸೇರಿದಂತೆ ಮೈಸೂರು ನಗರದ 15 ಸಂಘಟನೆಗಳು ಕರ್ನಾಟಕ ಬಂದ್ ಗೆ ಬೆಂಬಲ ನೀಡದಿರಲು ತೀರ್ಮಾನಿಸಿವೆ. ಆದರೆ ಡಿಸೆಂಬರ್ 5 ರಂದು ಕರ್ನಾಟಕದಲ್ಲಿ ಕನ್ನಡ ಭಾಷೆ,ಗಡಿ,ಸಂಸ್ಕೃತಿಗೆ ಮಾತ್ರ ನಮ್ಮ ಬೆಂಬಕ ಇದ್ದೇ ಇರುತ್ತದೆ. ಆದರೆ ಕೊರೊನಾ ಸೋಂಕಿನ ಕಾಲದ ಈ ವರ್ಷ ಬಹಳ ನಷ್ಟದಲ್ಲಿರುವ ನಮ್ಮನ್ನು ಒಂದು ಮಾತು-ಅಭಿಪ್ರಾಯಗಳನ್ನು ಕೇಳದೆ ಡಿಸೆಂಬರ್ 5 ರಂದು ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಿರುವುದು ಖಂಡಿತ ಸರಿಯಲ್ಲ ಎಂದು 15 ವಿವಿಧ ಸಂಘಟನೆಗಳೂ ಆಕ್ರೋಶ ವ್ಯಕ್ತಪಡಿಸಿವೆ.
ಕೆ ಟಿವಿ ನ್ಯೂಸ್ ಮೈಸೂರು

Add Comment