ಗೋಕರ್ಣದಲ್ಲಿ ಮಹಾಶಿವ ಪ್ರತ್ಯಕ್ಷ – ಅಚ್ಚರಿಯ ವಿಡಿಯೋ

1 Star2 Stars3 Stars4 Stars5 Stars (No Ratings Yet)
Loading...

ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಶಿವ ಪ್ರತ್ಯಕ್ಷನಾದ್ನಾ ? ತನ್ನ ಆತ್ಮಲಿಂಗವೇ ಇರೋ ಜಾಗಕ್ಕೆ ಖುದ್ದಾಗಿ ಆ ಮಹಾಬಲ ಬಂದ್ನಾ ? ಇಂತಹ ಹತ್ತು ಹಲವು ಪ್ರಶ್ನೆಗಳು ಈಗ ಗೋಕರ್ಣದಲ್ಲಿ ಭಾಈ ಚರ್ಚೆ ಹುಟ್ಟು ಹಾಕಿವೆ. ಇದಕ್ಕೆ ಕಾರಣ, ಕಡಲತೀರದಲ್ಲಿ ಕಾಣಿಸಿಕೊಂಡ ಬೃಹದಾಕಾರದ ಶಿವಲಿಂಗಾಕೃತಿಯ ಮೋಡ.
ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಿನ್ನೆ ಸಂಜೆ ನಡೆದ ಶಿವ-ಗಂಗಾ ವಿವಾಹ‌ ಮಹೋತ್ಸವದ ಸಂದರ್ಭದಲ್ಲಿ ಅಚ್ಚರಿಯೊಂದು ನಡೆದಿದೆ. ಕಲ್ಯಾಣೋತ್ಸವದ ವೇಳೆ ಆಕಾಶದಲ್ಲಿ ಮೋಡವು ಶಿವಲಿಂಗದ ರೂಪದಲ್ಲಿ ಕಾಣಿಸಿಕೊಂಡಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ. ಸೂರ್ಯಾಸ್ತದ ವೇಳೆ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿಶ್ಚಿತ ವಧುವಾಗಿ ಬಂದ ಗಂಗಾಮಾತೆ ಶಿವನನ್ನು ವಿವಾಹ‌ವಾಗುವ ವೇಳೆಗೆ ಮೋಡದಲ್ಲಿ ಶಿವಲಿಂಗದ ರೂಪ ಮೂಡಿದೆ. ಈ ದೃಶ್ಯ ಕಂಡು ಭಕ್ತರು ರೋಮಾಂಚನಗೊಂಡಿದ್ರು. ಇದನ್ನು ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

 

Add Comment