EXCLUSIVE VIDEO -ಹೊನ್ನಾಳಿ ಹುಲಿಗೆ ಗುಮ್ಮಿದ ಹೋರಿ

 

ಹೊನ್ನಾಳಿ ಹುಲಿಗೆ ಹೋರಿ ಗುಮ್ಮಿದೆ. ಹೌದು ದಾವಣಗೆರೆಯ ಹೊನ್ನಾಳಿಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಹೋರಿ ಗುದ್ದಿದೆ. ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 50 ಸಾವಿರ ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಶಾಸಕ ರೇಣುಕಾಚಾರ್ಯ ಕೂಡಾ ಪಾಲ್ಗೊಂಡಿದ್ದರು. ಅಭಿಮಾನಿಗಳು ರೇಣುಕಾಚಾರ್ಯರನ್ನು ಹೆಗಲ ಮೇಲೆ ಹೊತ್ತುಕೊಂಡು ಕುಣಿಯುತ್ತಿದ್ದರು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಹೋರಿ ಮೈ ಮೇಲೆ ನುಗ್ಗಿದೆ. ರೇಣುಕಾಚಾರ್ಯ ಪಕ್ಕಕ್ಕೆ ವಾಲಿ ಭಾರೀ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಕೆಳಗೆ ಬಿದ್ದ ಪರಿಣಾಮ ರೇಣುಕಾಚಾರ್ಯ ಸೇರಿ ಐವರು ಸಹಚರರಿಗೆ ಗಾಯಗಳಾಗಿವೆ.

Add Comment