ವಿಜಯೇಂದ್ರಗೆ ಶಾ ಹೇಳಿದ ಆ ಸೀಕ್ರೆಟ್ ಏನು?

1 Star2 Stars3 Stars4 Stars5 Stars (No Ratings Yet)
Loading...

ರಾಜ್ಯ ಬಿಜೆಪಿಯಲ್ಲಿ ಸಿಎಂ ಪುತ್ರ ವಿಜಯೇಂದ್ರ ಇಮೇಜ್ ದಿನೇ ದಿನೇ ವೃದ್ಧಿಸ್ತಿದೆ. ಕೆ,ಆರ್​.ಪೇಟೆಯಲ್ಲಿ ಉಪ ಚುನಾವಣೆ ಯಶಸ್ಸಿನ ಬಳಿಕ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ ವೈ ವಿಜಯೇಂದ್ರ ಅವರ ವರ್ಚಸ್ಸು ಹೆಚ್ಚಾಗಿದೆ. ಅವರು ನಿನ್ನೆ ರಾತ್ರಿ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.

ಈ ವೇಳೆ ಅಮಿತ್ ಶಾ ಅವರು ಬಿ ವೈ ವಿಜಯೇಂದ್ರ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಮಾಡಿದ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ. ವಿಜಯೇಂದ್ರ ಅಸಾಧ್ಯ ಗೆಲುವನ್ನು ಒಲಿಸಿಕೊಳ್ಳಲು ತಾವು ಮಾಡಿದ ಸ್ಟ್ರಾಟಜಿಗಳ ಬಗ್ಗೆಯೂ ಶಾಗೆ ವಿವರಣೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿರಿ ಎಂದು ಅಮಿತ್ ಶಾ ವಿಜಯೇಂದ್ರಗೆ ಹೇಳಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಾಲಿಗೆ ಬಂದಿರುವುದು ಅಮಿತ್ ಷಾ ಅವರಿಗೆ ಹೆಚ್ಚಿನ ಖುಷಿ ಕೊಟ್ಟಿದೆಯಂತೆ.
ಮಾತುಕತೆ ವೇಳೆ, ಸರ್ಕಾರದ ಮುಂದಿನ ಹಾದಿಗಳು, ಪಕ್ಷ ಬಲವರ್ಧನೆ ಮೊದಲಾದ ವಿಚಾರಗಳ ಬಗ್ಗೆ ಕೆಲವೊಂದಿಷ್ಟು ಸೂಕ್ಷ್ಮ ಸಲಹೆಗಳನ್ನು ವಿಜಯೇಂದ್ರ ಮೂಲಕ ಯಡಿಯೂರಪ್ಪಗೆ ರವಾನಿಸಿದ್ದಾರೆ. ಅಷ್ಟೇ ಅಲ್ಲ, ಸಂಪುಟ ರಚನೆ ಬಗ್ಗೆಯೂ ಯಡಿಯೂರಪ್ಪಗೆ ಕೆಲವು ಸಲಹೆಗಳನ್ನು ಶಾ ರವಾನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ, ದಿಲ್ಲಿಯಿಂದ ವಾಪಸ್ಸಾಗ್ತಿದ್ದಂತೆಯೇ, ವಿಜಯೇಂದ್ರ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶಾ ಕೊಟ್ಟಿರೋ ಸಂದೇಶವನ್ನು ಚಾಚೂ ತಪ್ಪದೆ ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ.

Add Comment