Breaking news – ಭಾರತ ದ್ವೇಷಿ ಪಾಕ್​ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್​ಗೆ ಗಲ್ಲು

1 Star2 Stars3 Stars4 Stars5 Stars (No Ratings Yet)
Loading...

ಪಾಕಿಸ್ತಾನದ ಅಧ್ಯಕ್ಷರಾಗಿದ್ದಷ್ಟೂ ದಿನ ಭಾರತವನ್ನೇ ದ್ವೇಷಿಸ್ತಿದ್ದ, ಪರ್ವೇಜ್ ಮುಷರಫ್​ಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಪಾಕಿಸ್ತಾನ ಸರ್ಕಾರದ ವಿರುದ್ಧ ದಂಗೆ ಎಬ್ಬಿಸಿದ್ದ ರಾಷ್ಟ್ರದ್ರೋಹದ ಆರೋಪದಲ್ಲಿ ಮುಷರಫ್​ಗೆ ಮರಣ ದಂಡನೆ ವಿಧಿಸಲಾಗಿದೆ. ಪೇಶಾವರ ಹೈಕೋರ್ಟ್​ನ ತ್ರಿಸದಸ್ಯ ಪೀಠ ಶಿಕ್ಷೆ ಘೋಷಿಸಿದೆ. 2006ರಲ್ಲೇ ದೇಶ ಬಿಟ್ಟಿರೋ ಪರ್ವೇಜ್ ಮುಷರಫ್​ ದುಬೈನಲ್ಲಿ ಅಡಗಿಕೊಂಡಿದ್ದಾರೆ.

2007ರಲ್ಲಿ ತುರ್ತು ಪರಿಸ್ಥಿತಿ ಹೇರಿ ಸರ್ಕಾರದ ವಿರುದ್ಧ ದಂಗೆ ಎಬ್ಬಿಸಿದ್ದ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಪೇಶಾವರ್​​​​ ಹೈಕೋರ್ಟ್​ನ ಸಿಜೆ ನೇತೃತ್ವದ ಪೀಠದಿಂದ ಆದೇಶ ಹೊರಬಿದ್ದಿದೆ. 2007 ತುರ್ತು ಪರಿಸ್ಥಿತಿ ಹೇರಿದ್ದ ಪರ್ವೇಜ್​​ ಮುಷರಫ್​​​, ಅಧಿಕಾರ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನಿಸಿದ್ದರು. ಈ ವೇಳೆ ದೇಶಾದ್ಯಂತ ಕ್ಷೋಭೆ, ಅರಾಜಕತೆ ಉಂಟಾಗಿತ್ತು. ಅಂತಿಮವಾಗಿ 2008ರ ಡಿಸೆಂಬರ್​ನಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದ್ರು. ಆ ಬಳಿ, ಮುಷರಫ್ ಮೇಲೆ ಕೊಲೆ, ದೊಂಬಿ, ದೇಶ ದ್ರೋಹ ಸೇರಿದಂತೆ ನೂರಾರು ಕೇಸ್​ಗಳು ಬಿದ್ದಿವೆ. ಅಂದ ಹಾಗೆ, ಸೇನಾ ಮುಖ್ಯಸ್ಥರಾಗಿದ್ದ ವೇಳೆಯೇ ಮುಷರಫ್​, ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದರು. ಆದರೆ, ಅಧಿಕಾರದ ಕೊನೆಯ ಅವಧಿಯಲ್ಲಿ ಭಾರತದೊಂದಿಗೆ ಸಂಬಂಧ ಸುಧಾರಿಸಲು ಯತ್ನಿಸಿದ್ದರು. ಇದೀಗ, ಮುಷರಫ್​ಗೆ ಮರಣ ದಂಡನೆ ಘೋಷಣೆಯಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿವೃತ್ತ ಸೇನಾ ಮುಖ್ಯಸ್ಥರೊಬ್ಬರು, ಗಲ್ಲುಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ, ಮುಷರಫ್​ಗೆ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿದೆ.

Add Comment