ಮನೆ ಮನೆಗೆ ಅಮಿತ್ ಶಾ – ಇಂಥಾ ಹೋಂ ಮಿನಿಸ್ಟರ್ ಇರಲೇ ಇಲ್ಲ !

1 Star2 Stars3 Stars4 Stars5 Stars (No Ratings Yet)
Loading...

ದೇಶಾದ್ಯಂತ CAA ಪರ-ವಿರೋಧ ಪ್ರತಿಭಟನೆಗಳು ನಡೀತಾನೆ ಇವೆ. ಪೌರತ್ವ ವಿರೋಧಿ ಬೆಂಕಿ ಆರಿಸಿ, ಸುಳ್ಳುಗಳ ಪ್ರವಾಹ ತಗ್ಗಿಸಲು, ಬಿಜೆಪಿ ಮುಂದಾಗಿದೆ. ಇದಕ್ಕಾಗಿ ಖುದ್ದು ಗೃಹ ಸಚಿವ ಅಮಿತ್ ಶಾ ಅವರೇ ಫೀಲ್ಡಿಗೆ ಇಳಿದಿದ್ದಾರೆ. ದೆಹಲಿಯ ಲಜ್​​ಪತ್​ ನಗರದಿಂದ ಬಿಜೆಪಿ ಅಭಿಯಾನ ಆರಂಭಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಮನೆಮನೆಗೆ ತೆರಳಿ ಅಭಿಯಾನ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ರಾಷ್ಟ್ರವ್ಯಾಪಿ ಜಾಗೃತಿ ಅಬಿಯಾನಕ್ಕೆ ಶಾ ಚಾಲನೆ ನೀಡಿದ್ರು. ಕಿಕ್ಕಿರಿದು ತುಂಬಿದ್ದ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಮಾತನಾಡಿದ ಶಾ ರಾಹುಲ್, ಪ್ರಿಯಾಂಕಾ ಗಾಂಧಿ ವಿರುದ್ಧ ಗುಡುಗಿದ್ರು. ಪೌರತ್ವ ವಿರೋಧಿ ಗಲಭೆಗಳಿಗೆ ರಾಹುಲ್, ಪ್ರಿಯಾಂಕಾ ಗಾಂಧಿಯೇ ಕಾರಣ ಎಂದು ನೇರವಾಗಿ ಆರೋಪಿಸಿದ್ರು.


ಕಾಯ್ದೆ ಬಗ್ಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಜನರ ಹಾದಿ ತಪ್ಪಿಸುತ್ತಿದ್ದು, ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆಂದು ಕಿಡಿಕಾರಿದ್ರು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡೇ ಮಾಡುತ್ತೇವೆ. ಈ ಮಹತ್ಕಾರ್ಯದಿಂದ ಒಂದು ಹೆಜ್ಜೆ ಕೂಡಾ ಹಿಂದೆ ಸರಿಯಲ್ಲ ಎಂದು ಗುಡುಗಿದ್ರು.

ಇನ್ನು ಸಿಎಎ ಅನ್ನು ವಿರೋಧಿಸುತ್ತಿರುವವರು ಪಾಕಿಸ್ತಾನದಲ್ಲಿನ ಗುರುದ್ವಾರದ ನಂಕಾನಾ ಸಾಹಿಬ್ ಮೇಲೆ ದಾಳಿ ನಡೆದಿದ್ದನ್ನು ಅರಿಯಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಯಾಕೆ ಮೌನ ವಹಿಸಿದೆ ಅಂತ ಶಾ ಪ್ರಶ್ನಿಸಿದ್ರು.

ಸಂಜೆ ವೇಳಗೆ ಖುದ್ದು ಮನೆಮನೆಗಳಿಗೆ ಭೇಟಿ ನೀಡಿದ್ರು. ದೆಹಲಿಯ ಲಜಪತ್ ನಗರದಲ್ಲಿ ಹಲವು ಮನೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿದ್ರು. ಕಾಂಗ್ರೆಸ್​ನ ಸುಳ್ಳುಗಳಿಗೆ ಬಲಿಯಾಗ್ಬೇಡಿ ಅಂತ ಮನವಿ ಮಾಡಿದ್ರು.

One thought on “ಮನೆ ಮನೆಗೆ ಅಮಿತ್ ಶಾ – ಇಂಥಾ ಹೋಂ ಮಿನಿಸ್ಟರ್ ಇರಲೇ ಇಲ್ಲ !

Add Comment