ಇದೇ ಮೊದಲ ಬಾರಿಗೆ ಕ್ವಾರಂಟೈನ್ ನಿಯಮ ರದ್ದುಗೊಳಿಸಿದ ಚೀನಾ

0

ಬೀಜಿಂಗ್‌: ಕೋವಿಡ್ ಬಿಕ್ಕಟ್ಟು ಎದುರಾದ ಬಳಿಕ ಇದೇ ಮೊದಲ ಬಾರಿಗೆ ಕ್ವಾರಂಟೈನ್‌ ಆಗದೆ ದೇಶ ಪ್ರವೇಶಿಸಲು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಚೀನಾ ಅನುಮತಿ ನೀಡಿದೆ.ಅದಕ್ಕೆ ಪೂರಕವಾಗಿ ಗುವಾಂಗ್‌ಡಾಂಗ್‌ ಹಾಗೂ ಶೆನ್‌ಜೆನ್‌ ಪ್ರಾಂತ್ಯಗಳ ವಿಮಾನ ನಿಲ್ದಾಣಗಳಿಗೆ ಟೊರಾಂಟೋ ಮತ್ತು ಸಿಂಗಾಪುರದಿಂದ ಆಗಮಿಸಿದ 387 ಪ್ರಯಾಣಿಕರನ್ನು ಸ್ವಾಗತಿಸಲಾಯಿತು.

ಇದರ ಜೊತೆಗೆ ಚೀನಾ ಇತರ ದೇಶಗಳ ಜತೆಗೆ ಹೊಂದಿಕೊಂಡಿರುವ ಗಡಿಗಳಲ್ಲಿಯೂ ಅಡ್ಡಿ ಇಲ್ಲದೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆ ಮಾಡಲು ಚೀನಾ ಅನುಸರಿಸಿದ್ದ ಶೂನ್ಯ ಕೊರೊನಾ ನೀತಿಯ ವಿರುದ್ಧ ಭಾರೀ ಟೀಕೆ ಹಾಗೂ ಪ್ರತಿಭಟನೆ ವ್ಯಕ್ತವಾಗಿತ್ತು.

 

About Author

Leave a Reply

Your email address will not be published. Required fields are marked *

You may have missed