BIG BREAKING -ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕಾ ಯುದ್ಧ ಘೋಷಣೆ

1 Star2 Stars3 Stars4 Stars5 Stars (No Ratings Yet)
Loading...

 

ಇರಾನ್ ವಿರುದ್ಧ ಯಾವುದೇ ಕ್ಷಣ ಅಮೇರಿಕ ವಾರ್ ಘೋಷಣೆಯಾಗಲಿದೆ. ವೈಟ್​ಹೌಸ್​ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದ್ದಾರೆ. ಒಂದೆರಡು ಗಂಟೆಗಳೊಳಗಾಗಿ ಅಮೆರಿಕಾ ಅಧಿಕೃತವಾಗಿ ಇರಾನ್ ಮೇಲೆ ಮುಗಿ ಬೀಳಲಿದೆ ಎನ್ನಲಾಗ್ತಿದೆ.
ಇಂದು ಮಧ್ಯ ರಾತ್ರಿ ಇರಾನ್​ ಇರಾಕ್​ನಲ್ಲಿರೋ ಅಮೆರಿಕಾದ 2 ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. 12ಕ್ಕೂ ಹೆಚ್ಚು ಬ್ಯಾಲೆಸ್ಟಿಕ್ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿದೆ. ಆರ್ಮಿ ಮುಖ್ಯಸ್ಥ ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಈ ದಾಳಿ ನಡೆಸಿದೆ. ಸುಲೇಮಾನಿ ಅಂತ್ಯಸಂಸ್ಕಾರ ನಡೆದ ದಿನವೇ ಇರಾನ್ ಪ್ರತೀಕಾರಕ್ಕೆ ಇಳಿದಿದೆ. ಇರಾನ್ ದಾಳಿಯಲ್ಲಿ ಉಂಟಾಗಿರೋ ಸಾವು ನೋವಿನ ಬಗ್ಗೆ ಮಾಹಿತಿ ಲಭ್ಯವಿಲ್ಲ.
ಇರಾನ್ ಪ್ರತಿದಾಳಿ ಬೆನ್ನಲ್ಲೇ ಟ್ರಂಪ್ ತುರ್ತು ಮೀಟಿಂಗ್ ನಡೆಸಿದ್ದಾರೆ. ಇರಾನ್ ಮೇಲೆ ಸಮರಕ್ಕೆ ಸಜ್ಜಾಗಿ ಎಂದು ಸೇನಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ಹೆಚ್ಚುವರಿ ಸೇನೆ ರವಾನಿಸಲೂ ಆದೇಶ ನೀಡಿದ್ದಾರೆ. ಅತ್ತ ಮಿಲಿಟರಿ ರಾಜಧಾನಿ ಪೆಂಟಗನ್​​ನಲ್ಲೂ ಸೇನಾಪಡೆಯ ಅಧಿಕಾರಿಗಳು ವಾರ್ ಸ್ಟ್ರಾಟಜಿ ಮೀಟಿಂಗ್ ನಡೆಸ್ತಿದ್ದಾರೆ. ಇರಾಕ್​ನಲ್ಲಿ ಹೈ ಅಲರ್ಟ್​ ಘೋಷಣೆ ಮಾಡಿರುವ ಅಮೇರಿಕದ ಸೇನೆ ಯಾವುದೇ ಕ್ಷಣದಲ್ಲೂ ಇರಾನ್ ಮೇಲೆ ಮುಗಿಬೀಳಲಿದೆ. ಈಗಾಗಲೇ ಗಲ್ಫ್ ರಾಷ್ಟ್ರಗಳಿಗೆ ನಾಗರಿಕ ವಿಮಾನಯಾನವನ್ನು ಅಮೆರಿಕಾ ಸ್ಥಗಿತಗೊಳಿಸಿದೆ. ಇದು ಯುದ್ಧಘೋಷಣೆಯ ಮುನ್ಸೂಚನೆ ಎಂದೇ ಬಿಂಬಿಸಲಾಗ್ತಿದೆ.

Add Comment