ಯಡಿಯೂರಪ್ಪ ಉತ್ತರಾಧಿಕಾರಿ ಘೋಷಿಸಿದ್ರಾ ಸಿದ್ಧಗಂಗಾ ಶ್ರೀಗಳು ?

ಬಿಜೆಪಿಯಲ್ಲಿ ಯಡಿಯೂರಪ್ಪನವರದ್ದೇ ಪರಮ ನಾಯಕತ್ವ. ಅವರೇ ಬಿಜೆಪಿ. ಬಿಜೆಪಿಯೇ ಅವರು. ಯಡಿಯೂರಪ್ಪ ಇರೋವರೆಗೂ ಬಿಜೆಪಿಗೆ ನಾಯಕತ್ವದ ಚಿಂತೆಯೇ ಇಲ್ಲ. ಶೂನ್ಯದಿಂದ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿದವರು ಯಡಿಯೂರಪ್ಪನವರು. ಆದರೆ ಯಡಿಯೂರಪ್ಪ ನಂತರ ಯಾರು ಅನ್ನೋ ಪ್ರಶ್ನೆಗೆ ಬಿಜೆಪಿ ನಾಯಕರಲ್ಲಿ ಇನ್ನೂ ಉತ್ತರವಿಲ್ಲ.

ಲಿಂಗಾಯತ ಸಮುದಾಯದ ಏಕಮೇವಾದ್ವಿತೀಯ ರಾಜಕೀಯ ನೇತಾರನೆಂದು ಗುರುತಿಸಿಕೊಂಡಿರುವ ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನು ಸಮುದಾಯ ಆಯ್ಕೆ ಮಾಡಿದ್ಯಾ ? ಅಂತಹದ್ದೊಂದು ಪ್ರಶ್ನೆಗೆ ತುಮಕೂರಿನಲ್ಲಿ ಇವತ್ತು ಉತ್ತರ ಸಿಕ್ಕಿದೆ. ಲಿಂಗೈಕ್ಯ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ ಶಿವಕುಮಾರ ಸ್ವಾಮೀಜಿಗಳ ಮೊದಲ ಪುಣ್ಯಸ್ಮರಣೆ ಕಾರ್ಯಕ್ರಮ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದಿದೆ. ಲಕ್ಷಾಂತರ ಭಕ್ತರು ಮಠದಲ್ಲಿ ನೆರೆದಿದ್ದಾರೆ.

ಈ ವೇದಿಕೆಯಲ್ಲಿ ಮಾತನಾಡಿದ ಸಿದ್ಧಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸಮಾಜಕ್ಕೆ ಸುತ್ತೂರು ಮತ್ತು ಸಿದ್ದಗಂಗಾ ಮಠಗಳು ಎರಡು ಕಣ್ಣಿದಂತೆ ಎಂದು ಬಣ್ಣಿಸಿದ್ದಾರೆ. ಜೊತೆಗೆ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಬರುವ ಅಪೇಕ್ಷೆ ಇತ್ತು .ಆದರೆ ಅವರ ಸ್ಥಾನವನ್ನು ತುಂಬಲು ವಿಜಯೇಂದ್ರ ಬಂದಿದ್ದಾರೆ. ವಿಜಯೇಂದ್ರ ಅವರು ಭವಿಷ್ಯದ ನಾಯಕ ಆಗಲಿದ್ದಾರೆ ಅಂತ ಘೋಷಿಸಿದರು. ವೇದಿಕೆಯಲ್ಲಿದ್ದ ಸುತ್ತೂರು ಶ್ರೀಗಳೂ ಮೌನವೇ ಸಮ್ಮತಿ ಎಂಬಂತೆ ಆಯ್ಕೆಗೆ ಒಪ್ಪಿಗೆ ಕೊಟ್ರಾ ?


ಲಿಂಗಾಯತ ಸಮುದಾಯ ತಮ್ಮ ಮುಂದಿನ ನೇತಾರನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿಕೊಂಡಿದೆ. ಶ್ರೀಗಳ ಮಾತಿನಲ್ಲೇ ಅದು ಪ್ರತಿಧ್ವನಿಸುತ್ತಿದೆ ಎಂಬ ಚರ್ಚೆಗಳು ಆರಂಭವಾಗಿದೆ. ಕೆ ಆರ್ ಪೇಟೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ವಿಜಯೇಂದ್ರ ಅವರ ನಾಯಕತ್ವದ ಪ್ರಖರತೆ ಬೆಳಕಿಗೆ ಬಂದಿದೆ. ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಈ ಮರಿಹುಲಿಯೇ ಬಿಜೆಪಿ ಮುನ್ನಡೆಸಲಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.

Add Comment