ಮಂಗಳೂರು ಬಾಂಬ್ – ಉಗ್ರರ ಟಾರ್ಗೆಟ್ ಆಗಿತ್ತಾ ಕದ್ರಿ ಮಂಜುನಾಥ ದೇವಾಲಯ ?

ಮಂಗಳೂರು ಬಾಂಬರ್​ ಕೈಯಲ್ಲಿದ್ದ ಮತ್ತೊಂದು ಬ್ಯಾಗ್ ಎಲ್ಲಿ? ಏರ್​ಪೋರ್ಟ್​ನಿಂದ ಬಂದ ಉಗ್ರ ಹೋಗಿದ್ದು ಎಲ್ಲಿಗೆ ? ಮಂಗಳೂರು ಪೊಲೀಸರು ಈಗ ಏರ್​ಪೋರ್ಟ್ ಬಾಂಬ್​ ನ ಹಿಂದೆ ಬಿದ್ದಿದ್ದಾರೆ. ತನಿಖೆಯ ಜಾಡಿನಲ್ಲಿ ಸಾಕಷ್ಟು ಬೆಚ್ಚಿಬೀಳೋ ಸುದ್ದಿಗಳು ಬಯಲಾಗ್ತಿವೆ.

ಏರ್​ಪೋರ್ಟ್​​ನಲ್ಲಿ ಬಾಂಬ್​ ಇಟ್ಟ ಶಂಕಿತ ವ್ಯಕ್ತಿ, ಅದೇ ಆಟೋದಲ್ಲಿ ಪಂಪ್​ವೆಲ್​ ತನಕ ಬಂದಿದ್ನಂತೆ. ಬಳಿಲ ರಾಜಕುಮಾರ್​ ಬಸ್​ ಹತ್ತಿ ಶ್ರೀದೇವಿ ಕಾಲೇಜು ಬಳಿ ಇಳಿದಿದ್ನಂತೆ. ಇಳಿಯುವಾಗ ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಹೋಗುವ ದಾರಿ ಬಗ್ಗೆ ವಿಚಾರಿಸಿದ್ನಂತೆ. ಹೀಗಾಗಿ, ಕದ್ರಿ ದೇವಸ್ಥಾನ ಕೂಡಾ ಉಗ್ರರ ಟಾರ್ಗೆಟ್ ಆಗಿತ್ತಾ ಅನ್ನೋ ಆಂಗಲ್​ನಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಅಂದ ಹಾಗೆ ಜನವರಿ 15ರಿಂದ 22ರ ವರೆಗೆ ಕದ್ರಿ ದೇಗುಲದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತಿದೆ. ಜಾತ್ರೋತ್ಸವದಲ್ಲಿ ಪ್ರತಿದಿನವೂ 30 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗ್ತಿದ್ದಾರೆ. ಹೀಗಾಗಿ, ಏರ್​ಪೋರ್ಟ್ ಬಾಂಬರ್​ನ ಮತ್ತೊಂದು ಟಾರ್ಗೆಟ್ ಆಗಿತ್ತಾ ಕದ್ರಿ ಜಾತ್ರೆ? ಅನ್ನೋ ಸಂಶಯ ಮೂಡಿದೆ. ಕದ್ರಿ ದೇವಾಲಯಕ್ಕೆ ಇದೀಗ ಸಿಆರ್​ಪಿಎಫ್​ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಶಂಕಿತ ಬಾಂಬರ್​ಗಾಗಿ ತೀವ್ರ ಶೋಧ ಮುಂದುವರಿದಿದೆ.

Add Comment