ಬಂಟರ ಸಂಘ ಬೆಂಗಳೂರು ವತಿಯಿಂದ ಸಾಂಸ್ಕೃತಿಕ ದಿನಾಚರಣೆ

ಬೆಂಗಳೂರು, ಜ-26
ಬಂಟರ ಸಂಘ ಬೆಂಗಳೂರು ವತಿಯಿಂದ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ದಿನಾಚರಣೆ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ದಿ. ಡಾ. ಮಧುಕರ ಶೆಟ್ಟಿ ಐಪಿಎಸ್ ಸ್ಮಾರಕ ಪ್ರಶಸ್ತಿಯನ್ನು ಹಿರಿಯ ಐಎಫ್ ಎಸ್ ಅಧಿಕಾರಿ ಶ್ರೀ ವಿಜಯ್ ಕುಮಾರ್ ಶೆಟ್ಟಿ ರವರಿಗೆ ನೀಡಲಾಯಿತು. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಫ್ರೊ. ಡಾ. ಎನ್ ಆರ್ ಶೆಟ್ಟಿಯವರಿಗೆ ದಿ.ಶ್ರೀ ಕೆ.ಪಿ ರಾಮಣ್ಣ ಶೆಟ್ಟಿ ಸ್ಮಾರಕ ಶೈಕ್ಷಣಿಕ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅಂತರರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ನಾಯ್ಕ ಬಹುಮಾನ ಪಡೆದ ಕ್ರೀಡಾಪಟುಗಳನ್ನು ಅಭಿನಂದಿಸಿದರು. ಇದೇ ರೀತಿಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಪ್ರೋತ್ಸಾಹ ನೀಡುವುದರಿಂದ ನಮ್ಮ ದೇಶ ಕ್ರೀಡೆಯಲ್ಲಿ ಮತ್ತಷ್ಟು ಬೆಳೆಯಲು ಅವಕಾಶ ಇರುತ್ತದೆ. ಯುವ ಕ್ರೀಡಾಪಟುಗಳು ಯಾವುದೇ ಕಾರಣಕ್ಕೂ ತಮ್ಮ ಛಲವನ್ನು ಬಿಡಬಾರದು, ಗುರಿ ಸಾಧಿಸಲು ಮತ್ತಷ್ಟು ಅಭ್ಯಾಸ ಮಾಡಿದರೆ ನೀವು ಗುರಿ ಮುಟ್ಟಲು ಸಾದ್ಯ ಎಂದು ಕಿವಿ ಮಾತು ಹೇಳಿದ್ರು‌. ಇನ್ನೂ ಸಮಾರಂಭದಲ್ಲಿ ಬಂಟರ ಸಂಘದ ಅದ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ರಾಜೀವ್ ಗಾಂಧಿ ವಿ.ವಿಯ ವಿಶ್ರಾಂತ ಉಪ ಕುಲಪತಿಗಳಾದ ಡಾ. ರಮಾನಂದ ಶೆಟ್ಟಿ ಹಾಗೂ ಅಂತರರಾಷ್ಟ್ರೀಯ ರ್ಯಾಲಿ ಕ್ರೀಡಾಪಟು ಅಶ್ವಿನ್ ನಾಯ್ಕ, ಬಂಟರ ಸಂಘದ ಕಾರ್ಯದರ್ಶಿ ಮಧುಕರ ಎಂ ಶೆಟ್ಟಿ ಉಪಸ್ಥಿತರಿದ್ದರು.

Add Comment