ಯುವರಾಜ್ ಸ್ವಾಮಿಯಿಂದ ಚಿತ್ರವೊಂದಕ್ಕೆ ನಟಿಸಲು ನಟಿ ರಾಧಿಕಾ ಕುಮಾರಸ್ವಾಮಿಗೆ 75 ಲಕ್ಷ ರೂ. ಸಂಭಾವನೆ!

ಬಿಜೆಪಿ ಮುಖಂಡರು ಮತ್ತು ಆರೆಸ್ಸೆಸ್ ವರಿಷ್ಠರ ಹೆಸರುಗಳನ್ನು ಹೇಳಿಕೊಂಡು ಭಾರಿ ವಂಚನೆ ಎಸಗಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿರುವ ಕಳ್ಳ ಸ್ವಾಮಿ
ಯುವರಾಜ್ ಸ್ವಾಮಿ ಅವರಿಂದ ನಟಿ ರಾಧಿಕಾ ಕುಮಾರಸ್ವಾಮಿ 75 ಲಕ್ಷ ರೂ. ಪಡೆದಿರುವುದು ದೃಢಪಟ್ಟಿದೆ.
ಈ ಬಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆಯಿಂದ ನಟಿ ರಾಧಿಕಾ ಕುಮಾರಸ್ವಾಮಿ ಅವರೇ ಹೇಳಿಕೆ ನೀಡಿ ” ಹೌದು,ನನಗೆ 17 ವರ್ಷಗಳಿಂದಲೂ ಯುವರಾಜ್ ಸ್ವಾಮಿ ಗೊತ್ತು. ಅವರು ನಮ್ಮ ತಂದೆ ಅನಾರೋಗ್ಯಕ್ಕೀಡಾದಾಗ 15 ಲಕ್ಷ ರೂ. ಸಹಾಯ ಮಾಡಲು ನನ್ನ ಸಹೋದರನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು‌” ಎಂದಿದ್ದರು.
ಇದೀಗ ತಮಗೆ ಯುವರಾಜ್ ಸ್ವಾಮಿ 75 ಲಕ್ಷ ರೂ. ಕೊಟ್ಟಿರುವುದು ನಿಜ. 75 ಲಕ್ಷ ರೂ. ಹಣವನ್ನು ನೀಡಿ ನಾಟ್ಯರಾಣಿ ಶಾಂತಲಾ ಎಂಬ ಚಿತ್ರಕ್ಕೆ ನಾಯಕಿ ನಟಿಯಾಗಬೇಕೆಂದು ಹೇಳಿದ್ದರು‌. ಅಲ್ಲದೆ ಯುವರಾಜ್ ಸ್ವಾಮಿ ಅವರದ್ದೇ ಆದ ಸಿನಿಮಾ ಪ್ರೊಡಕ್ಷನ್ ಹೌಸ್ ಇದೆ‌‌. ನಾಟ್ಯರಾಣಿ ಶಾಂತಲಾ ಚಿತ್ರಕ್ಕೆ ಮುನಿರಾಜು ಎಂಬುವವರು ನಿರ್ಮಾಪಕರಾಗಿದ್ದರು. ಆದರೆ ಈಗ ನನಗೆ ಈ ಯುವರಾಜ್ ಸ್ವಾಮಿ ಹೀಗೆ ವಂಚನೆ ಮಾಡಿ ಸಿಸಿಬಿ ಪೊಲೀಸರಿಂದ ಅರೆಸ್ಟ್ ಆಗ್ತಾರೆ ಎಂದು ಗೊತ್ತಿರಲಿಲ್ಲ. ಈಗಾಗಲೇ ಸಿಸಿಬಿ ಪೊಲೀಸರು ನನ್ನ ಸಹೋದರನ ಬ್ಯಾಂಕ್ ಖಾತೆಗೆ ಬಂಧಿತ ಯುವರಾಜ್ ಸ್ವಾಮಿ ಈ ಹಿಂದೆ ನನ್ನ ಸಿನಿಮಾ ನಟನೆಗೆ ನೀಡಿದ್ದ 75 ಲಕ್ಷ ರೂ‌. ಸಂಭಾವನೆ ಬಗ್ಗೆ ವಿಚಾರಣೆ ಮಾಡಿ ಕಳುಹಿಸಿದ್ದಾರೆ. ಮುಂದೆ ಈ ಬಗ್ಗೆ ನನಗೆ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದರೆ ಖಂಡಿತ ನಿಜವನ್ನು ಹೇಳುತ್ತೇನೆ” ಎಂದು ಸಮಜಾಯಿಷಿ ನೀಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪ್ರೀತಿಯ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ.
ಆದರೆ ಈ ಬಗ್ಗೆ ತಕರಾರು ಎತ್ತಿರುವ ಕೆಲವರು ಹೀಗೆ ಹೇಳಿದ್ದಾರೆ : ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇದುವರೆಗೂ ಯಾವ ನಾಯಕಿ ನಟಿಗೂ ಒಂದು ಸಿನಿಮಾದಲ್ಲಿ ನಟಿಸಲು 75 ಲಕ್ಷ ರೂ. ಸಂಭಾವನೆ ನೀಡಿಲ್ಲ‌. ಹಿಂದೆ ಮಾಜಿ ಸಂಸದೆ ರಮ್ಯಾ ನಾಯಕಿಯಾಗಿ ನಟಿಸಲು ಒಂದು ಸಿನಿಮಾಗೆ 40 ಲಕ್ಷ ರೂ. ಸಂಭಾವನೆ ಪಡೆದಿದ್ದೇ ಸ್ಯಾಂಡಲ್ ವುಡ್ ನ ನಾಯಕಿ ನಟಿಗೆ ನೀಡಿದ್ದ highest payment. ಆದರೆ ಈಗ ರಾಧಿಕಾ ಮೇಡಂಗೆ ಅದ್ಯಾರು 75 ಲಕ್ಷ ರೂ. ಕೊಟ್ಟು ಸಿನಿಮಾದಲ್ಲಿ ಹೀರೋಯಿನ್ ಆಗಿ ಎಂದು ಹೇಳಿದರೊ ಗೊತ್ತಿಲ್ಲ” ಎಂದು ಅನುಮಾನ ವ್ಯಕ್ತಪಡಿಸಿದ್ಣಾರೆ.
ಹೀಗಾಗಿ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಈಗ ವಂಚಕ ಯುವರಾಜ್ ಸ್ವಾಮಿ ಜೊತೆಗಿನ ಭಾರಿ ಹಣಕಾಸಿನ ವ್ಯವಹಾರ ಸಂಕಷ್ಟ ತಂದಿದೆ‌. ಬಲ್ಲಮೂಲಗಳ ಪ್ರಕಾರ ಈ ವಾರದಲ್ಲೇ ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ತಮ್ಮ ಎರಡನೇ ಪ್ರೀತಿಯ ಪತ್ನಿ ನಟಿ ರಾಧಿಕಾ
ಕುಮಾರಸ್ವಾಮಿ ಅವರನ್ನು ಸಿಸಿಬಿ ಪೊಲೀಸರ ತನಿಖೆಯ ಇಕ್ಕಳದಿಂದ ಬಚಾವ್ ಮಾಡಲು ಪತಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೇ ಫೋನಾಯಿಸಿ ಪ್ರಕರಣದಿಂದ ತಮ್ಮ ಕುಟುಂಬಕ್ಕೆ ಹಾನಿ ತರಬೇಡಿ ಎಂದು ಕೇಳಿಕೊಂಡಿದ್ದಾರೆ ಎಂದು ಗಾಳಿಸುದ್ದಿ ಹರಡಿದೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment