ವಂಚಕ ಯುವರಾಜ್ ಸ್ವಾಮಿ ಜೊತೆ ಹಣಕಾಸು ವ್ಯವಹಾರ-ನಟಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ಡ್ರಿಲ್

ಹೆಸರಲ್ಲೇ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಅರ್ಧಾಂಗಿಯಾಗಿದ್ದರೂ ಇದೀಗ ಕೋಟಿಗಟ್ಟಲೆ ಹಣಕಾಸಿನ ವ್ಯವಹಾರವನ್ನು ಸಾರ್ವಜನಿಕರಿಗೆ ಹಲವು ಕೋಟಿಗಟ್ಟಲೆ ಟೋಪಿ ಹಾಕಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಂಚಕ ಸ್ವಾಮಿ ಯುವರಾಜ್ ಸ್ವಾಮಿ ಜೊತೆ ನಡೆಸಿರುವ ಬಗ್ಗೆ ಇಂದು ಬೆಳಗ್ಗೆಯಿಂದಲೇ ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ನಡೆಯುತ್ತಿದೆ.
ಸಹೋದರ ರವಿರಾಜ್ ಸಿಸಿಬಿ ವಿಚಾರಣೆ ನಂತರ ಇಂದು ಬೆಳಗ್ಗೆ ಸಿಸಿಬಿಯಿಂದ ನೊಟೀಸ್ ಪಡೆದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮನೆಯಿಂದ ತಮ್ಮ ವಕೀಲರ ಸಲಹೆಯ ಮೇರೆಗೆ ತಯಾರಿ ಮಾಡಿಕೊಂಡು ವಿಚಾರಣೆಗೆ ಹಾಜರಾದರು.
ಅದರಂತೆ ಬೆಂಗಳೂರಿನ ಸಿಸಿಬಿ ಕೇಂದ್ರ ಕಚೇರಿಯಲ್ಲಿ ಸಿಸಿಬಿ ಎಸಿಪಿ ನಾಗರಾಜ್ ಮುಂದೆ ನಟಿ ರಾಧಿಕಾ ಕುಮಾರಸ್ವಾಮಿ ಬೆಳಗ್ಗೆ ಸಮಯಕ್ಕೆ ಸರಿಯಾಗಿ ವಿಚಾರಣೆಗೆ ನಸುನಗುತ್ತಲೇ ಹಾಜರಾದರು.
ಬಳಿಕ ಇದೀಗ ಎರಡೂವರೆ ಗಂಟೆಗೂ ಹೆಚ್ಚಿನ ಕಾಲ ಸಿಸಿಬಿ ಎಸಿಪಿ ನಾಗರಾಜ್ ಅವರು ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸತತವಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಸುಸ್ತು ಹೊಡೆಸಿದರು‌.
ಮೊದಲು ಬುಧವಾರ ಮಧ್ಯಾಹ್ನ ತಮ್ಮ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ
ನಟಿ ರಾಧಿಕಾ ಅವರು ಯುವರಾಜ್ ಸ್ವಾಮಿಯಿಂದ 15 ಲಕ್ಷ ರೂ. ಹಣವನ್ನು ತಮ್ಮ ದಿವಂಗತ ತಂದೆ ದೇವರಾಜ್ ಅವರ ಅನಾರೋಗ್ಯಕ್ಕೆಂದು ಪಡೆದಿದ್ದು ನಿಜ ಎಂದು ಹೇಳಿ ಆನಂತರ ಮತ್ತೆ 60 ಲಕ್ಷ ರೂ. ಹಣವನ್ನು ತಮ್ಮ ಸಹೋದರನ ಬ್ಯಾಂಕ್ ಖಾತೆಗೆ ಬಂದಿತ್ತು. ಏಕೆಂದರೆ ನಾನು ಮುನಿರಾಜು ಅವರ ನಿರ್ದೇಶನದ ‘ನಾಟ್ಯರಾಣಿ ಶಾಂತಲಾ’ ಎಂಬ ಚಿತ್ರಕ್ಕೆ ನಟಿಸಲು ಸಂಭಾವನೆ ರೂಪದಲ್ಲಿ ಒಟ್ಟು 75 ಲಕ್ಷ ರೂ. ಪಡೆದಿದ್ದು ನಿಜ ಎಂದು ಹಾರಿಕೆ ಉತ್ತರ ನೀಡಿ ಗೊಂದಲ ಮೂಡಿಸಿದ್ದರು.
ಆದರೆ ಸ್ಯಾಂಡಲ್ ವುಡ್ ನಲ್ಲಿ ಯಾವುದೇ ನಾಯಕಿ ನಟಿಗೂ ಚಿತ್ರವೊಂದಕ್ಕೆ 75 ಲಕ್ಷ ರೂ. ಸಂಭಾವನೆ ನೀಡಿಲ್ಲ ಎಂದು ಕನ್ನಡ ಚಿತ್ರರಂಗದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಅನಿವಾರ್ಯವಾಗಿ ನಿನ್ನೆ ಸಂಜೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಇಲಾಖೆಯಿಂದ ನೊಟೀಸ್ ಪಡೆದಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಮಧ್ಯರಾತ್ರಿಯವರೆಗೂ ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿ ಬೆಳಗ್ಹೆ ಪೂರ್ವತಯಾರಿಯಂತೆ ವಿಚಾರಣೆಗೆ ಸಿಸಿಬಿ ಕಚೇರಿಗೆ ಆಗಮಿಸಿದ್ದರು.
ಆದರೆ ಸಿಸಿಬಿ ಪೊಲೀಸರ ವಿಚಾರಣೆಗೆ ಸುಸ್ತು ಹೊಡೆದಿರುವ ನಟಿ ರಾಧಿಕಾ ಕುಮಾರಸ್ವಾಮಿ ವಂಚಕ ಸ್ವಾಮಿ ಯುವರಾಜ್ ಸ್ವಾಮಿ ಬಗ್ಗೆ ಕೆಲವೊಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಇಂದು ಇಡೀ ದಿನ ಸಿಸಿಬಿ ಕಚೇರಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಅವರ ವಿಚಾರಣೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment