ತುರಿಕೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಇದನ್ನು ಉಪಯೋಗಿಸಿ, ತುರಿಕೆಯಿಂದ ಮುಕ್ತರಾಗಿ

ಈಗಿನ ಕಾಲದ ಧೂಳಿನ ಜೀವನಕ್ಕೆ ಮನುಷ್ಯ ಬೇಸತ್ತು ಹೋಗಿದ್ದಾನೆ. ಹೌದು. ಧೂಳು ಕೇವಲ ಒಂದು ಧೂಳಾಗಿ ಮಾತ್ರ ಇರುವುದಿಲ್ಲ. ಇದರಿಂದ ಅನೇಕ ರೋಗಗಳು ಮನುಷ್ಯನಲ್ಲಿ ಹುಟ್ಟಿಕೊಳ್ಳುವಂತೆ ಮಾಡುತ್ತದೆ. ಅದರಲ್ಲಿ ತುರಿಕೆಯೂ ಸಹ ಒಂದಾಗಿದೆ. ಹೌದು. ತುರಿಕೆ ಮನುಷ್ಯನನ್ನು ಬಹಳಷ್ಟು ಕಿರಿಕಿರಿಗೆ ಉಂಟುಮಾಡುತ್ತದೆ. ಇನ್ನು ಈ ತುರಿಕೆ ಕೇವಲ ಧೂಳಿನಿಂದ ಮಾತ್ರ ಹರಡುವುದಿಲ್ಲ. ತ್ವಚೆಯನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಳ್ಳದಿರುವುದು, ಸ್ನಾನ ಮಾಡದಿರುವುದು, ಇನ್ನಿತರ ವಿಚಾರಗಳಿಂದ ತುರಿಕೆ ಹರಡುತ್ತದೆ. ಅಂತವರು ಪದೇ ಪದೇ ತುರಿಸಿ ತುರಿಸಿ ಮತ್ತಷ್ಟು ಹೆಚ್ಚು ಮಾಡುಕೊಳ್ಳುತ್ತಾರೆ. ಕೊನೆಗೆ ಅತಿಯಾದಾಗ ಡಾಕ್ಟರ್ ಬಳಿ ಹೇಳಿಕೊಳ್ಳಲಾಗದೆ, ಹಿಂಜರಿಯುತ್ತಾರೆ. ಅಂತವರಿಗೆ ಈ ಮನೆಮದ್ದುಗಳು ಬಹಳ ಉಪಯೋಗಕ್ಕೆ ಬರುತ್ತವೆ. ಈ ಮನೆಮದ್ದುಗಳನ್ನು ಯೂಸ್ ಮಾಡಿ, ನಿಮ್ಮ ದೇಹದಲ್ಲಿರುವ ತುರಿಕೆಯನ್ನು ಹೋಗಲಾಡಿಸಿಕೊಳ್ಳಿ.

1) ಕೊಬ್ಬರಿ ಎಣ್ಣೆ :- ಕೊಬ್ಬರಿ ಎಣ್ಣೆಯನ್ನು ಮಂದವಾಗಿ ಕಾಯಿಸಿ, ಸ್ವಲ್ಪ ಬೆಚ್ಚಗಿನ ಎಣ್ಣೆಯನ್ನು ತುರಿಕೆ ಇರುವ ಜಾಗಕ್ಕೆ ಪ್ರತಿದಿನ ಹಚ್ಚಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ತುರಿಕೆ ಕಡಿಮೆಯಾಗುತ್ತದೆ.

2) ಬೇವಿನ ಎಲೆ :- ಬೇವಿಗೆ ರೋಗನಿರೋಧಕ ಶಕ್ತಿಯಿದ್ದು, ತ್ವಚೆಯನ್ನು ಕಾಪಾಡುವಲ್ಲಿ ಅತ್ಯುತ್ತಮ ಮನೆಮದ್ದಾಗಿದೆ. ಇನ್ನು ತುರಿಕೆ ಇರುವವರು ಬೇವಿನ ಎಣ್ಣೆಯನ್ನು ಕಾಯಿಸಿ, ಪ್ರತಿದಿನ ಆ ಜಾಗಕ್ಕೆ ಹಚ್ಚಿ ಮಾಲೀಶ್ ಮಾಡಿದರೆ ತುರಿಕೆ ನಿವಾರಣೆಯಾಗುತ್ತದೆ.

 

 

3) ಪುದಿನಾ :- ಪುದಿನಾ ಎಲೆಗಳಲ್ಲಿ ಸೂಕ್ಷ್ಮಾಣು ಪ್ರತಿಬಂಧಕ ಅಂಶಗಳಿದ್ದು, ಇದು ತ್ವಚೆಯಲ್ಲಿನ ಕೀಟಾಣುಗಳನ್ನು ಕೊಲ್ಲುತ್ತದೆ. ಹೀಗಾಗಿ ಪುದೀನಾ ಪೇಸ್ಟ್ ತಯಾರಿಸಿ ಹಚ್ಚುವುರದರಿಂದ ತುರಿಕೆ ಮಾಯವಾಗುತ್ತದೆ.

4) ಲೋಳೆಸರ :- ತುರಿಕೆಯಿಂದ ರಕ್ಷಿಸಿಕೊಳ್ಳಲು ಲೋಳೆಸರ ಅತ್ಯುತ್ತಮ ಮನೆಮದ್ದಾಗಿದ್ದು, ಇದನ್ನು ಹಚ್ಚುವುದರಿಂದ ತುರಿಕೆಯಿಂದ ದೂರ ಉಳಿಯಬಹುದು.

5) ಪೆಟ್ರೋಲಿಯಂ ಜೆಲ್ಲಿ :- ಪೆಟ್ರೋಲಿಯಂ ಜೆಲ್ಲಿ ತ್ವಚೆಗೆ ತೇವಾಂಶವನ್ನು ನೀಡುವುದರ ಜೊತೆಗೆ, ಉರಿ ಮತ್ತು ತುರಿಕೆಯನ್ನು ಹೋಗಲಾಡಿಸುತ್ತದೆ.

 

6) ಬಾದಾಮಿ ಎಣ್ಣೆ :- ತುರಿಕೆಯಿಂದ ಬಳಲುತ್ತಿರುವವರು ಬಾದಾಮಿ ಎಣ್ಣೆಯನ್ನು ಉಪಯೋಗಿಸಬಹುದು. ಇದರಿಂದ ತುರಿಕೆ ದೂರವಾಗುತ್ತದೆ.

ಇವಿಷ್ಟು ಅಂಶಗಳು ನಿಮ್ಮ ತ್ವಚೆಯ ತುರಿಕೆಯನ್ನು ಹೋಗಲಾಡಿಸುವ ಅತ್ಯುತ್ತಮ ಮನೆನದ್ದುಗಳಾಗಿದ್ದು, ಇವುಗಳನ್ನು ಬಳಸುವುದರಿಂದ ಆದಷ್ಟು ಬೇಗ ನಿಮ್ಮ ತುರಿಕೆ ಮಾಯವಾಗುತ್ತದೆ. ಜೊತೆಗೆ ನಯವಾದ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

Add Comment