ಬುಧವಾರ ಸಂಜೆ 4 ಗಂಟೆಗೆ 7 ನೂತನ ಸಚಿವರಿಂದ ಪ್ರಮಾಣವಚನ

ಇಡೀ ರಾಜ್ಯವೇ ಕುತೂಹಲದಿಂದ ಗಮನಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರಾಚನೆ ನಾಳೆ ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ.
ನಾಳೆ ಬುಧವಾರ ಸಂಜೆ 4 ಗಂಟೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜಭವನದಲ್ಲಿ ನಡೆಯಲಿರುವ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಆದ್ದರಿಂದ ಈಗ ಸಂಪುಟದಲ್ಲಿ ಖಾಲಿ ಉಳಿದಿರುವ ಸಚಿವ ಸ್ಥಾನಗಳಿಗಾಗಿ ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ತೀವ್ರವಾಗಿ ಕಡೆಕ್ಷಣದವರೆಗೂ ಲಾಬಿ ನನಡೆಸುತ್ತಿದ್ದಾರೆ.
ಆದರೆ ಈಗಾಗಲೇ ವಲಸಿಗರಾದ ಪರಿಷತ್ ಸದಸ್ಯರಾದ ಆರ್.ಶಂಕರ್,ಎಂ.ಟಿ.ಬಿ.ನಾಗರಾಜ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಮುನಿರತ್ನ ಹಾಗೂ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಕ್ಷೇತ್ರದಿಂದ 8 ಬಾರಿ ಶಾಸಕರಾಗಿರುವ ಉಮೇಶ್ ಕತ್ತಿ ಸಚಿವರಾಗುವುದು 100% ಖಚಿತವಾಗಿದೆ.
ಆದರೆ ಸಚಿವರಾಗಲು ಇನ್ನೂ ಸಿ.ಪಿ.ಯೋಗೇಶ್ವರ್ ಮತ್ತು ಅರವಿಂದ ಲಿಂಬಾವಳಿ ಲಾಬಿ ನಡೆಸಬೇಕಾಗಿದೆ. ಕಾರಣ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಬಾರಿ ಶಾಸಕರಾಗಲು ವಿಫಲರಾಗಿ ಅಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.
ಆದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಿ.ಪಿ.ಯೋಗೇಶ್ವರ್ ದಕ್ಷಿಣ ಕರ್ನಾಟಕದ ಶಾಸಕರನ್ನು ಆಪರೇಶನ್ ಕಮಲದ ಮೂಲಕ ಮುಂಬೈ ಸ್ಟಾರ್ ಹೋಟೆಲಿನಲ್ಲಿರಿಸಿ ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣರಾಗಿದ್ದಾರೆ. ಇದರಿಂದ ಸ್ವತಃ ಸಿಎಂ ಯಡಿಯೂರಪ್ಪನವರೇ ಯೋಗೇಶ್ವರ್ ಮತ್ತೆ ಸಚಿವರಾಗುವುದು 100% ಖಚಿತ ಎಂದು ಹೇಳಿದ್ದರು.
ಏಕೆಂದರೆ ಯೋಗೇಶ್ವರ್ ಸಚಿವರಾಗಲು ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆದಾಗ್ಯೂ ಯೋಗೇಶ್ವರ್ ಶಾಸಕರಾಗಿಲ್ಲ,ಆದಕಾರಣ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ನಮ್ಮಂತಹ ಮೂಲ ಬಿಜೆಪಿ ಶಾಸಕರನ್ನು ಸಚಿವರನ್ನಾಗಿ ನೇಮಿಸಬೇಕೆಂದು ಹೈಕಮಾಂಡ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ(ಹೊನ್ನಾಳಿ ಶಾಸಕ),ಚಿತ್ರದುರ್ಗ ಕ್ಷೇತ್ರದಿಂದ 5ನೇ ಬಾರಿ ಶಾಸಕರಾಗಿರುವ ಜಿ.ಎಚ್.ತಿಪ್ಪಾರೆಡ್ಡಿ,ಕುಮಾರ್ ಬಂಗಾರಪ್ಪ,ಎಸ್.ಅಂಗಾರ,ಹಾಲಾಡಿ ಶ್ರೀನಿವಾಸ ಶೆಟ್ಟಿ,ರಾಜುಗೌಡ ಸೇರಿದಂತೆ ಹಲವಾರು ಬಿಜೆಪಿ ಹಿರಿಯ ಶಾಸಕರು ಸಹ ಸಚಿವರಾಗಲು ಹರಸಾಹಸ ನಡೆಸಿದ್ದಾರೆ.
ಆದರೆ ಬಿಜೆಪಿ ಹೈಕಮಾಂಡ್ ಬೆಂಗಳೂರಿನ ಮಹದೇವಪುರ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಅರವಿಂದ ಲಿಂಬಾವಳಿ,ಪರಿಷತ್ ಸದಸ್ಯ
ಸುನಿಲ್ ಕುಮಾರ್,ಎಸ್.ಅಂಗಾರ,ಮಹಿಳಾ ಖೋಟಾದಿಂದ ಯಾದವ ಸಮಾಜದ ರಾಜ್ಯದ ಏಕೈಕ ಶಾಸಕಿ ಹಿರಿಯೂರಿನ ಪೂರ್ಣಿ‌ಮಾ ಶ್ರೀನಿವಾಸ್
ಅವರನ್ನು ಸಚಿವರನ್ನಾಗಿ ನೇಮಿಸಲು ಉತ್ಸುಕವಾಗಿದೆ.
ಆದರೆ ಮಂಗಳವಾರ ಸಂಜೆ ಕಡೇಕ್ಷಣದಲ್ಲಿ ಒಂದಿಬ್ಬರು ಹೈಕಮಾಂಡ್ ನಿಂದ ಅಚ್ಚರಿ ಎಂಬಂತೆ ಸಚಿವರಾಗಲು ಆಯ್ಕೆಯಾಗಬಹುದು.
ಆದರೆ ಮಂಗಳವಾರ ಸಂಜೆ ಉಳಿದ ಮೂವರು ಶಾಸಕರು ಸಚಿವರಾಗಿ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment