ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್ ಆದಿತ್ಯ ಆಳ್ವ

ಕಳೆದ 4 ತಿಂಗಳಿನಿಂದ ನಾಪತ್ತೆಯಾಗಿದ್ದ ಡ್ರಗ್ಸ್ ಪೆಡ್ಲರ್ ಆಗಿದ್ದ ಹಿರಿಯ ರಾಜಕಾರಣಿ ದಿವಂಗತ ಜೀವರಾಜ್ ಅಳ್ವ ಅವರ ಪುತ್ರ ಆದಿತ್ಯಾ ಆಳ್ವ ಮ ಕೊನೆಗೂ ಬೆಂಗಳೂರಿನ ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ತಮಿಳುನಾಡಿನ ಚೆನ್ನೈ ಮಹಾನಗರದಲ್ಲಿ ತಲೆಮರೆಸಿಕೊಂಡಿದ್ದ ಆದಿತ್ಯಾ ಆಳ್ವನ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರಿನ ಸಿಸಿಬಿ ಪೊಲೀಸರು ಕಳೆದ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಕ್ಕೂ ಮುನ್ನ ಆದಿತ್ಯಾ ಆಳ್ವಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ಬಳಿಕ ಆದಿತ್ಯಾ ಆಳ್ವ ಪರ ವಕೀಲರು ಸುಪ್ರೀಂಕೋರ್ಟ್ ಪೀಠದ ಮುಂದೆ ನಿರೀಕ್ಷಣಾ ಅರ್ಜಿ‌ ಸಲ್ಲಿಸಿದ್ದರು. ಅದರೆ ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿ ಇಂತಹ ಅರ್ಜಿಗಳನ್ನು ಹೈಕೋರ್ಟ್ ಪೀಠಕ್ಕೆ ಸಲ್ಲಿಸಲು ಸೂಚಿಸಿತ್ತು.‌
ಬಂಧಿತ ಆದಿತ್ಯಾ ಆಳ್ವ ಅವರು ಸಹೋದರಿ ಪ್ರಿಯಾಂಕಾ ಆಳ್ವಾ ಮತ್ತವರ ಪತಿ ಬಾಲಿವುಡ್ ಸ್ಟಾರ್ ನಟ ವಿವೇಕ್ ಒಬೇರಾಯ್ ಜೊತೆ ಮುಂಬೈ ನಿವಾಸದಲ್ಲಿ ಅವಿತಿದ್ದಾರೆಂದು ಸಿಸಿಬಿ ಪೊಲೀಸರು ಸರ್ಚ್ ವಾರಂಟ್ ಪಡೆದು ಪರಿಶೀಲನೆ ನಡೆಸಿದ್ದರು.
ಆದರೆ ದೇಶ-ವಿದೇಶಗಳಲ್ಲಿ ಹುಡುಕಾಡಿದರೂ ಸಿಸಿಬಿ ಪೊಲೀಸರಿಗೆ ಸಿಗದಿದ್ದ ಮಹಾನ್ ಚಾಲಾಕಿ ಆದಿತ್ಯಾ ಆಳ್ವ ಮುಂಬೈನ ತನ್ನ ಅಕ್ಕ ಪ್ರಿಯಾಂಕಾ ಆಳ್ವಾ-ಬಾವ ವಿವೇಕ್ ಒಬೇರಾಯ್ ಮನೆ ಸೇರಿದಂತೆ ಅನೇಕಾನೇಕ ಕಡೆ ತಲೆಮರೆಸಿಕೊಂಡು ಕಳೆದ 15 ದಿನಗಳ ಹಿಂದೆ ಚೆನ್ನೈ ಮಹಾನಗರದ ಹೊರವಲಯದ ರೆಸಾರ್ಟ್ ವೊಂದರಲ್ಲಿ ಅವಿತಿದ್ದ‌. ಆದರೆ ನಿನ್ನೆ ಸೋಮವಾರ ಆದಿತ್ಯ ಆಳ್ವ ಕೊನೆಗೂ ಅರೆಸ್ಟ್ ಆಗಿದ್ದಾನೆ. ಹೆಬ್ಬಾಳ ಬಳಿಯ ತನ್ನ ಐಷಾರಾಮಿ ಮನೆಯನ್ನೇ ಡ್ರಗ್ಸ್ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಬಗ್ಗೆ ಈಗ ಸಿಸಿಬಿ ಪೊಲೀಸರಿಂದ ನಿರಂತರ ವಿಚಾರಣೆ ಎದುರಿಸಬೇಕಿದೆ.
ಕೆ ಟಿವಿ ನ್ಯೂಸ್ ಚೆನ್ನೈ

Add Comment