3 ಕೃಷಿ ಕಾಯ್ದೆಗಳಿಗೆ ಸು.ಕೋರ್ಟ್ ತಡೆಯಾಜ್ಞೆ-ಮೋದಿ ಸರ್ಕಾರಕ್ಕೆ ಮುಖಭಂಗ

ಕೇಂದ್ರಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಮಸೂದೆಗಳಿಗೆ ತಡೆ ನೀಡಿರುವ ಸುಪ್ರೀಂಕೋರ್ಟ್ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ.
ಈ ಬಗ್ಗೆ ಇಂದು ಮಹತ್ವದ ಆದೇಶ ನೀಡಿದ ಸುಪ್ರೀಂಕೋರ್ಟ್ ವಿವಾದವನ್ನು ಬಗೆಹರಿಸಲು ಧನವಂತ್ ಶೇಖಾವತ್,ಜಿತೇಂದ್ರ ಸಿಂಗ್ ಮಾನೆ,ಅಶೋಕ್ ಗುಲಾಟಿ,ಡಾ.ಪ್ರಮೋದ್ ಕುಮಾರ್ ಅವರನ್ನೊಳಗೊಂಡ ಸಮಿತಿಯಿಂದ ರೈತರು ಮತ್ತು ಕೇಂದ್ರಸರ್ಕಾರ ಮಧ್ಯೆ ಸಂಧಾನ ಮಾತುಕತೆಯನ್ನು ನಡೆಸಿ,ಮೂರು ವಿವಾದಿತ ಕೃಷಿ ಮಸೂದೆಗಳನ್ನು ಪರಿಶೀಲಿಸಿ ಸುಪ್ರೀಂಕೋರ್ಟ್ ಗೆ ವರದಿ ನೀಡಲು ಆದೇಶಿಸಿದೆ.
ಆದರೆ ಮೂರು ಕೃಷಿ ಮಸೂದೆಗಳಿಗೆ ನೀಡಿರುವ ತಡೆಯಾಜ್ಞೆ ತಾತ್ಕಾಲಿಕವಾಗಿದೆ,ಸಮಿತಿ ವರದಿ ಬಂದ ನಂತರ ನ್ಯಾಯಪೀಠ ಮೂರು ಕೃಷಿ ಮಸೂದೆಗಳ ಸಾಧಕ-ಬಾಧಕಗಳನ್ನು ಅವಲೋಕಿಸಿ ಅಂತಿಮ ತೀರ್ಪು ನೀಡಲಿದೆ ಎಂದು ಮುಖ್ಯನ್ಯಾಯಮೂರ್ತಿಗಳು ತೀರ್ಪಿನಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ನ್ಯಾಯಪೀಠದ ಮುಂದೆ ವಿಚಾರಣೆಗೆ ಹಾಜರಾಗದ ರೈತರ ಕ್ರಮವನ್ನು ನ್ಯಾಯಪೀಠ ಟೀಕಿಸಿದೆ,ರೈತರು ಬೇಕಿದ್ದರೆ ಪ್ರತಿಭಟನೆ ನಡೆಸಲಿ ಎಂದು ನ್ಯಾಯಪೀಠ ಹೇಳಿ ಸುಪ್ರೀಂಕೋರ್ಟ್ ವಿಚಾರಣೆಗೆ ಪ್ರಧಾನಿ ಬೇಕಿದ್ದರೆ ಬರಲಿ,ಬರದಿದ್ದರೆ ಬೇಡ ಎಂದು ಹೇಳಿದ ನ್ಯಾಯಪೀಠ ರೈತರು ವಿಚಾರಣೆಗೆ ರೈತರು ಬರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಜನರಿಗೆ ಸರಿಯಾಗಿ ತಿಳಿಸಿ ಮನವರಿಕೆ ಮಾಡಿಕೊಡದೆ ಏಕಾಏಕಿ ದೇಶದಲ್ಲಿ
ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿರುವ ಕ್ರಮಕ್ಕೆ ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ ನೀಡಿರುವುದು ಭಾರಿ ಮುಖಭಂಗವನ್ನುಂಟುಮಾಡಿದೆ.
ಕೆ ಟಿವಿ ನ್ಯೂಸ್ ನವದೆಹಲಿ

Add Comment