ರಾಕಿಂಗ್ ಸ್ಟಾರ್ ಯಶ್ ಗೆ ನೋಟಿಸ್-ಸಚಿವ ಕೆ ಸುಧಾಕರ್ ಪ್ರತಿಕ್ರಿಯೆ

ನಟ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ 2 ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಯಶ್ ಸಿಗರೇಟ್ ಸೇದುವ ದೃಶ್ಯವನ್ನು ಚಿತ್ರೀಕರಿಸಿದ್ದರು. ಈ ಹಿನ್ನೆಲೆ ಆ ದೃಶ್ಯವನ್ನು ತೆಗೆಯುವಂತೆ ಆರೋಗ್ಯ ಇಲಾಖೆ ರಾಕಿ ಬಾಯ್ ಗೆ ನೋಟಿಸ್ ನೀಡಿದೆ. ಇನ್ನು ಈ ಕುರಿತು ವೈದ್ಯಕೀಯ ಸಚಿವರಾದ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಕ್ಯಾನ್ಸರ್ ಪೀಡಿತರು ಹೆಚ್ಚುತ್ತಿದ್ದಾರೆ. ಇಂತಹ ಸಮಯದಲ್ಲಿ ಸಿನಿಮಾ ನಾಯಕರು ತಮ್ಮ ಸಿನಿಮಾಗಳಲ್ಲಿ ಧೂಮಪಾನ ಮಾಡುವ ದೃಶ್ಯವನ್ನು ಹೆಚ್ಚು ಬಿಂಬಿಸುತ್ತಿದ್ದರೆ, ಅವರ ಅಭಿಮಾನಿಗಳು ಸಹ ಅವರನ್ನೇ ಅನುಕರಿಸುತ್ತಾರೆ. ಹೀಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ತೋರಿಸದೆ, ಜನರಲ್ಲಿ ಜಾಗೃತಿ ಮೂಡಿಸುವಂತಹ ದೃಶ್ಯಗಳನ್ನು ತೋರಿಸಬೇಕೆಂದು ತಿಳಿಸಿದರು.

Add Comment