ಸಿಂಧನೂರು ಸಾರಿಗೆ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಅಪರಿಚಿತ ಶವದ ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸರು-ನಗರಸಭೆ ಸಿಬ್ಬಂದಿಗಳು

ನಿನ್ನೆ ಮಂಗಳವಾರ ರಾಯಚೂರು ಜಿಲ್ಲೆಯ ಸಿಂಧನೂರು ಬಸ್ ನಿಲ್ದಾಣ ಆವರಣದಲ್ಲಿ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ ಮೃತ ವ್ಯಕ್ತಿ ಯಾರು?ಎಲ್ಲಿನವರು? ಎಂದು ಯಾರಿಗೂ ಗೊತ್ತಿಲ್ಲ. ಅಲ್ಲದೆ ಸಾವಿನ ಕಾರಣ ಸಹ ತಿಳಿದು ಬಂದಿರುವುದಿಲ್ಲ ಮತ್ತು ಮೃತವ್ಯಕ್ತಿಯ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.
ಯಾರಾದರೂ ಮೃತ ವ್ಯಕ್ತಿಯ ಫೋಟೊ ನೋಡಿ ಪರಿಚಯವಿದ್ದರೆ ತಕ್ಷಣವೇ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸಲು ಕೋರಿದರೂ ಸಹ ಸಿಂಧನೂರು ಪೊಲೀಸ್ ಠಾಣೆಗೆ 48 ಗಂಟೆಗಳಾದರೂ ಸಹ ಯಾರೂ ಬಂದು ಮಾಹಿತಿ ನೀಡಿಲ್ಲ.
ಆದ್ದರಿಂದ ಸರ್ಕಾರಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಿಷ್ಟಾಚಾರದಂತೆ ಸಿಂಧನೂರು ಠಾಣೆ ಪೊಲೀಸರು ಮತ್ತು ಸಿಂಧ‌ನೂರು ನಗರಸಭೆ ಸಿಬ್ಬಂದಿಗಳು ಸೇರಿ ಅನಿವಾರ್ಯವಾಗಿ ಈ ಅಪರಿಚಿತ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರ ಮಾಡಬೇಕಾಯಿತು. ಈ ಅಪರಿಚಿತ ವ್ಯಕ್ತಿಯ ಶವ ಸಿಂಧನೂರು ಸಾರಿಗೆ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಬಗ್ಗೆ ಸಿಂಧನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಕೆ ಟಿವಿ ನ್ಯೂಸ್ ಸಿಂಧನೂರು

Add Comment