ಕೃಷಿ ಕಾಯ್ದೆಗಳ ವಿರುದ್ಧದ ದೆಹಲಿ ಹೋರಾಟಕ್ಕೆ ಸಾಥ್ ನೀಡಿದ ಮಸ್ಕಿ ತಾಲ್ಲೂಕಿನ AIDO ಸಂಘಟನೆ

ದೆಹಲಿ ಹೋರಾಟಕ್ಕೆ ಸಾಥ್ ನೀಡಿದ ಮಸ್ಕಿ ತಾಲ್ಲೂಕ AIDO ಸಂಘಟನೆ.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಆರ್ಗನೈಸೇಶನ್ ವತಿಯಿಂದ
ಕರಾಳ ಕೃಷಿ ಕಾಯ್ದೆಗಳ ವಿರುದ್ಧದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಪ್ರಚಾರ ಸಭೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನವಾರ ಕಾರಲಕುಂಟೆ,ಬಸಾಪುರ ಮುಂತಾದ ಹಳ್ಳಿಗಳಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಆರ್ಗನೈಸೇಶನ್ ವತಿಯಿಂದ
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಪ್ರಚಾರ ಸಭೆಗಳನ್ನು ನಡೆಸಲಾಯಿತು.
ನಿನ್ನೆ ಸಂಜೆ ಗೋನವಾರ ಗ್ರಾಮದಲ್ಲಿ ಸಭೆಯನ್ನು ಉದ್ದೇಶಿಸಿ ಎಐಡಿವೈಒ ಜಿಲ್ಲಾ ಅಧ್ಯಕ್ಷರಾದ ಚನ್ನಬಸವ ಜಾನೇಕಲ್ ಅವರು ಮಾತನಾಡಿದರು. ಅಗತ್ಯವಸ್ತುಗಳ ತಿದ್ದುಪಡಿ ಕಾಯ್ದೆ,ಗುತ್ತಿಗೆ ಕೃಷಿ ಕಾಯಿದೆ,ರೈತರು ಬೆಳೆದ ಬೆಳೆಗಳ ಮಾರುಕಟ್ಟೆ ಹಾಗೂ ಸಬಲೀಕರಣ ಕುರಿತಾದ ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಕುರಿತು ವಿವರಿಸಿದರು.
ಈ ನೀತಿಗಳು ರೈತರನ್ನು ಸಬಲೀಕರಣ ಮಾಡುವ ಹೆಸರಿನಲ್ಲಿ ದುರ್ಬಲ ಮಾಡಲು ತರಲಾಗಿದೆ. ಎಪಿಎಂಸಿಯಲ್ಲಿ ರೈತರಿಗೆ ಸಮಸ್ಯೆ ಇದೆ ಎನ್ನುತ್ತಾ, ಅಂಬಾನಿ,ಅದಾನಿ ಅವರಂತಹ ದೊಡ್ಡ ದೊಡ್ಡ ತಿಮಿಂಗಿಲಗಳ ಬಾಯಿಗೆ ಆಹಾರವಾಗಿ ಬಲಿ ನೀಡಲಾಗುತ್ತದೆ ಎಂದಿದ್ದರೂ ವ್ಯಾಪಾರಿ ವ್ಯಾಪಾರ ಮಾಡುತ್ತಾನೆ ಹೊರತು ರೈತರ ತೊಂದರೆ ಬಗ್ಗೆ ಯೋಚನೆ ಮಾಡುವುದಿಲ್ಲ.ಈಗಾಗಲೇ ಸಿಂಧನೂರಿನಲ್ಲಿ ರಿಲಯನ್ಸ್ ಕಂಪನಿ 1 ಸಾವಿರ ಕ್ವಿಂಟಲ್ ಭತ್ತ ಖರೀದಿ ಆರಂಭಿಸಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಎಪಿಎಂಸಿ ಮುಚ್ಚುವುದಿಲ್ಲ ಎಂದು ಯಾರೇ ಹೇಳಲಿ, ತನ್ನಿಂದ ತಾನೇ ಮುಚ್ಚಿಹೋಗುತ್ತವೆ. ನಂತರ ಖಾಸಗೀ ಎಪಿಎಂಸಿಯವರು ಹೇಳಿದಂತೆ ರೈತರು ಕೇಳಬೇಕಾಗುತ್ತದೆ ಎಂದರು.
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಕೂಡಲೇ ರೈತರಿಗೆ ತೊಂದರೆ ಉಂಟುಮಾಡಿದರೆ, ಕ್ರಮೇಣ ಗ್ರಾಹಕರನ್ನು ದೋಚುವ ಕಾನೂನಾಗಿದೆ. ಈ ಜನವಿರೋಧಿ, ರೈತ ವಿರೋಧಿ. ನೀತಿಯ ವಿರುದ್ಧ ದೆಹಲಿಯಲ್ಲಿ ರೈತರು ರಾಜೀ ರಹಿತ ಹೋರಾಟ ನಡೆಸಿದ್ದಾರೆ. ಕೃಷಿಕಾಯ್ದೆಗಳು ರದ್ದಾಗುವವರೆಗೆ ಹೋರಾಟ ಬಿಡುವುದಿಲ್ಲ ಎಂಬ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ನಾವು ಬೆಂಬಲಿಸಬೇಕು. ಆದ್ದರಿಂದ ಎಐಡಿವೈಒ ಯುವಜನ ಸಂಘಟನೆ ಗ್ರಾಮಗಳಲ್ಲಿ ರೈತ ಹೋರಾಟ ಬೆಂಬಲಿಸಿ ಸಭೆಗಳನ್ನು ನಡೆಸುತ್ತಿದೆ ಎಂದರು. ನಮ್ಮ ಹಳ್ಳಿಗಳ ಯುವಕರು ನಿರುದ್ಯೋಗ ಸೇರಿದಂತೆ ರೈತರ ಈ ಸಮಸ್ಯೆ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಯುವಜನರ ಹೋರಾಟ ಸಮಿತಿ,ಗೋನವಾರ ಗ್ರಾಮ ಘಟಕವನ್ನು ರಚಿಸಲಾಯಿತು. ಸಮಿತಿ ಸಂಚಾಲಕರಾಗಿ ಬಾಲಾಜಿ ಸಿಂಗ್, ಚಂದ್ರಶೇಖರ ಸಾವಕಾರ, ದೇವಣ್ಣ ಹುಸ್ಕಿಹಾಳ ಅವರುಗಳಿದ್ದಾರೆ. ಸಮಿತಿ ಸದಸ್ಯರಾಗಿ ಅಮರೇಶ ಜಿ.ಶಂಕರಪ್ಪ,ದುರುಗೇಶ,ಮೌನೇಶ,
ನಟರಾಜ,ಬಸವರಾಜ ಕವಿತಾಳ,ತಿಮ್ಮಣ್ಣ ಹುಸ್ಕಿಹಾಳ,
ನವೀನ್ ಸಿಂಗ್,ಶರಣಬಸವ ಟಿ, ಕೆ.ಮೌನೇಶ ಆಯ್ಕೆಯಾಗಿದ್ದಾರೆ.
ಅದೇ ರೀತಿ ಕಾರಲಕುಂಟೆ ಹಾಗೂ ಬಸಾಪುರ ಗ್ರಾಮಗಳಲ್ಲಿ ಸಭೆ ನಡೆಸಲಾಯಿತು. ಎಐಡಿವೈಒ ಜಿಲ್ಲಾ ಉಪಾಧ್ಯಕ್ಷರಾದ ತಿರುಪತಿ ಗೋನವಾರ, ಬಾಲಾಜಿ, ನವೀನ್ ಮುಂತಾದ ಸದಸ್ಯರು, ರೈತರು , ಯುವಜನರು ಸಭೆಯಲ್ಲಿ ಭಾಗವಹಿಸಿದ್ದರು.
ಚನ್ನಬಸವ ಹಿರೇಮಠ ಕೆ ಟಿವಿ ನ್ಯೂಸ್ ಮಸ್ಕಿ

Add Comment