ನಾನು ಗೋಮಾಂಸ ತಿಂದಿಲ್ಲ, ತಿನ್ಬೇಕು ಅನ್ಸಿದ್ರೆ ತಿಂತೀನಿ-ಸಿದ್ದರಾಮಯ್ಯ ಹೇಳಿಕೆ

ನಾನು ಇಲ್ಲಿಯವರೆಗೂ ಗೋಮಾಂಸ ತಿಂದಿಲ್ಲ. ಮುಂದೆ ತಿನ್ಬೇಕು ಅನ್ಸಿದ್ರೆ ತಿಂತೀನಿ. ಅದನ್ನ ಕೇಳೋಕೆ ಇವರು ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಗೋಮಾಂಸ ಹಾಗೂ ಹಂದಿ ಮಾಂಸ ತಿಂದಿಲ್ಲ. ಮುಂದೆ ತಿನ್ನಬೇಕು ಅನ್ಸಿದ್ರೆ ತಿಂತೀನಿ. ನನ್ನ ಆಹಾರ ಪದ್ದತಿಯನ್ನು ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಅವರಿಗಿಷ್ಟವಾದ ಆಹಾರವನ್ನು ತಿನ್ನೋಕೆ ಎಲ್ಲರಿಗೂ ಅಧಿಕಾರವಿದೆ. ಹೀಗಿರುವಾಗ ಸೊಪ್ಪು ತಿನ್ನಬೇಕಾ? ಮಾಂಸ ತಿನ್ನಬೇಕಾ ಎಂಬುದು ನಮಗೆ ಬಿಟ್ಟಿದ್ದು, ಇದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

Add Comment