ಹಾಸನದಲ್ಲಿ ಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ – ನಳೀನ್ ಕುಮಾರ್ ಕಟೀಲ್ 

ರಾಜ್ಯದಲ್ಲಿ ಎಲ್ಲಿ ಬರ ಬಂದರೂ, ಯಾವ ಕೆರೆ ಬತ್ತಿದ್ದರು ಹಾಸನದ ಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ. ಇದು ಕಾಲಕ್ಕೆ ತಕ್ಕಂತೆ ಬರುವಂತಹ ಕಣ್ಣೀರು ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಖಾರವಾಗಿಯೇ ವ್ಯಂಗ್ಯವಾಡಿದರು. ಹಾಸನದ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದ ಭಾಷಣದಲ್ಲಿ ಅವರು ಮಾತನಾಡುತ್ತಾ, ಚುನಾವಣೆ ಸಮೀಪಿಸಿದಾಗ ಅಥವಾ ಆಯಾ ಕಾಲಕ್ಕೆ ತಕ್ಕಂತೆ ದೇವೇಗೌಡರಿಗೆ ಕಣ್ಣೀರು ಬರುತ್ತದೆ. ಈಗಲಾದರೂ ಜನರು ಬದಲಾಗಬೇಕು ಯಾಕೆಂದರೆ ಈಗ ದೇಶ ಮತ್ತು ರಾಜ್ಯದಲ್ಲಿ ಪರಿವರ್ತನೆಯ ಸಮಯ ಬಂದಿದೆ ಎಂದು ಆಕ್ರೋಶದ ಮಾತುಗಳನ್ನಾಡಿದ್ರು. ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲಿ ಕಾಂಗ್ರೆಸ್ಗೆ ಮೂರು ಶಾಪ ತಟ್ಟಿದೆ. ಸ್ವಾತಂತ್ರ್ಯ ಬಂದ ಬಳಿಕ ಗಾಂಧೀಜಿಯವರ ಚಿಂತನೆಯನ್ನು ಉಳಿಸಲಿಲ್ಲ.  ಅಂಬೇಡ್ಕರ್ ಎರಡು ಬಾರಿ ಸೋಲನ್ನ ಅನುಭವಿಸಿದ್ದೆ ಕಾಂಗ್ರೆಸ್ ಪಕ್ಷದಿಂದ. ಅಲ್ಲದೆ ಅಂಬೇಡ್ಕರ್ ಶವಸಂಸ್ಕಾರಕ್ಕೂ ಕಾಂಗ್ರೆಸ್ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ ಇದರ ಜೊತೆಗೆ ಕಾಂಗ್ರೆಸ್ ನ ಪ್ರಥಮ ಚಿಹ್ನೆ ಆಕಳು ಮತ್ತು ಗೋವು. ಆದರೆ ನಂತರದ ದಿನಗಳಲ್ಲಿ ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡಿತು. ಹೀಗಾಗಿ ಮೂರು ಶಾಪಗಳು ಕಾಂಗ್ರೆಸ್ ಪತನಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಎಸ್.ಎಲ್.ಎನ್ ಯೋಗೇಶ್ ಕೆ.ಟಿವಿ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment