ಇದು ರಾಮನೇ ಆರಿಸಿದ ರಾಮಮಂದಿರ ಟ್ರಸ್ಟ್ ನ ಅಡ್ರೆಸ್ !

1 Star2 Stars3 Stars4 Stars5 Stars (No Ratings Yet)
Loading...

 

ಇಂದು ಬೆಳಗ್ಗೆ ಭಾರತದಲ್ಲಿ ಐತಿಹಾಸಿಕ ಘೋಷಣೆಯಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲು ಟ್ರಸ್ಟ್ ರಚಿಸಿರುವುದಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಕೋಟಿ ಕೋಟಿ ಭಕ್ತರ ಕನಸಾಗಿರೋ ರಾಮಮಂದಿರ ಟ್ರಸ್ಟ್ ಘೋಷಣೆ ಮಾಡುವುದು ನನ್ನ ಪುಣ್ಯ ಎಂದು ಮೋದಿ ಭಾವುಕರಾಗಿದ್ದಾರೆ. ಆದರೆ, ಮೋದಿಗಿಂತ ಪರಮ ರಾಮಭಕ್ತನಿಗೆ ಭಗವಾನ್ ಶ್ರೀರಾಮ ಭರ್ಜರಿ ಆಶೀರ್ವಾದ ಮಾಡಿದ್ದಾನೆ.

ಶ್ರೀರಾಮಚಂದ್ರನ ಕೃಪೆಗೆ ಪಾತ್ರರಾಗಿರೋದು ಬೇರೆ ಯಾರೂ ಅಲ್ಲ, ಕೆ ಪರಾಶರನ್. 93 ವರ್ಷದ ತಾತ, ಮಹಾ ಮೇಧಾವಿ ವಕೀಲನಿಗೆ ರಾಮನ ಕೃಪೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಿರೋ 15 ಸದಸ್ಯರ ಟ್ರಸ್ಟ್ ಈ ಪರಾಶರನ್ ಅವರ ನಿವಾಸದಲ್ಲಿಯೇ ಆರಂಭವಾಗಲಿದೆ. ಹೌದು, ಈಗಾಗಲೇ ಕೇಂದ್ರ ಸರ್ಕಾರ ನಿಯಮಗಳನ್ವಯವೇ ರಾಮಮಂದಿರ ಟ್ರಸ್ಟ್ ಅಂದರೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಅನ್ನೋ ಹೆಸರಿನ ಟ್ರಸ್ಟ್ ಅನ್ನು ರಿಜಿಸ್ಟರ್ ಮಾಡಿದೆ. ಟ್ರಸ್ಟ್ ರಿಜೆಸ್ಟ್ರೇಷನ್‍ಗೆ ಕೊಟ್ಟಿರೋ ಹೆಸರೇ, ಕೆ ಪರಾಶರನ್ ಅವರ ನಿವಾಸದ ವಿಳಾಸ. ಆರ್-20, ಗ್ರೇಟರ್ ಕೈಲಾಶ್-1, ನವದೆಹಲಿ ವಿಳಾಸಕ್ಕೆ ಟ್ರಸ್ಟ್ ರಿಜಿಸ್ಟರ್ ಆಗಿದೆ.

ಪರಾಶರನ್‍ಗೂ ರಾಮನಿಗೂ ಏನು ಸಂಬಂಧ ಅಂತಿದ್ದೀರಾ ? ರಾಮನಿಗೆ ತನ್ನ ಜನ್ಮಭೂಮಿಯನ್ನು ಉಳಿಸಿಕೊಟ್ಟಿದ್ದೇ ಈ ಹನುಮಂತ. ದೇಹ ಕುಳ್ಳಗಿದ್ದರೂ, ಅಪರೂಪದ ಮೇಧಾವಿತನ ಹೊಂದಿರುವವರ ಪರಾಶರನ್. ರಾಮಲಲ್ಲಾನ ಪರ 93 ವರ್ಷದ ಪರಾಶರನ್ ದಣಿವರಿಯದೇ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಡಿದ್ದರು. ರಾಮನನ್ನು ಕಣ್ಣಾರೆ ಕಾಣದ ಈ ಸಹಸ್ರಮಾನದಲ್ಲೂ ರಾಮನ ಇರುವಿಕೆಯನ್ನು ತಮ್ಮ ವಾದದ ಮೂಲಕವೇ ಮಂಡಿಸಿದ್ದರು. ಮಸೀದಿ ಎಲ್ಲಾದರೂ ಕಟ್ಟಬಹುದು. ರಾಮ ಹುಟ್ಟಿದ ಜಾಗವನ್ನು ಬೇರೆ ಕಡೆ ಸೃಷ್ಟಿಸಲು ಸಾಧ್ಯವಿಲ್ಲ ಎಂದಿದ್ದರು. ಅಷ್ಟೇ ಅಲ್ಲ ರಾಮ ಎನ್ನುವುದು ಕಾಲ್ಪನಿಕ ವ್ಯಕ್ತಿಯಲ್ಲ. ನಂಬಿಕೆ ಸುಮ್ಮನೇ ಹುಟ್ಟಿಕೊಳ್ಳುವುದಿಲ್ಲ. ಆ ಜಾಗವೆಲ್ಲಾ ರಾಮನಿಗೇ ಸೇರಿದ್ದು ಎಂದು ಸುಪ್ರೀಂ ಕೋರ್ಟ್‍ಗೆ ಮನದಟ್ಟು ಮಾಡಿಕೊಟ್ಟಿದ್ದರು. ರಾಮನಿಗಾಗಿ ತಮ್ಮ ಜೀವಮಾನವಿಡೀ ಹೋರಾಡಿದ ವಕೀಲ ಪರಾಶರನ್ ರನ್ನು ರಾಮನ ನಿಜ ಬಂಟ ಹನುಮನ ಪ್ರತಿರೂಪವೆಂದೇ ಜನ ಭಾವಿಸಿದ್ದಾರೆ. ಇದೀಗ, ಅವರ ನಿವಾಸದಲ್ಲೇ ಟ್ರಸ್ಟ್ ರಿಜಿಸ್ಟರ್ ಆಗಿರೋದು ಹೆಮ್ಮೆಯ ವಿಚಾರವಾಗಿದೆ. ಅದು ಶ್ರೀರಾಮ ಕರುಣಿಸಿದ ಮಹಾ ಪ್ರಸಾದವಾಗಿದೆ. ರಾಮನ ವಿಳಾಸ ಉಳಿಸಿದ ವಕೀಲನ ವಿಳಾಸದಲ್ಲೇ ರಾಮನ ಮುಂದಿನ ಕಾರ್ಯಗಳು ನಡೆಯಲಿವೆ.

Add Comment