ಶ್ರೀರಾಮ ಜನ್ಮಭೂಮಿ ದೇಣಿಗೆ ಸಂಗ್ರಹ ಅಭಿಯಾನಕ್ಕೆ ನಟ ಅಭಿಷೇಕ್ ಅಂಬರೀಶ್ ಚಾಲನೆ

ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಇಂದು ನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದ್ದಾರೆ. ದೇಶದಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಲಾಗುತ್ತಿದ್ದು, ಅನೇಕ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇಂದು ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ, ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಲಾಗಿತ್ತು. ಇನ್ನು ಈ ಅಭಿಯಾನಕ್ಕೆ ನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದ್ದು, ಜೊತೆಗೆ ಟ್ರಸ್ಟ್ ಗೆ ಸ್ವತಃ ದೇಣಿಗೆಯನ್ನೂ ಸಹ ನೀಡಿದ್ದಾರೆ.

Add Comment