ಯಶ್ ಗೆ ನೋಟಿಸ್ ನೀಡಿಲ್ಲ, ಮನವಿ ಮಾಡಿದ್ದೇವೆ-ಸಚಿವ ಸುಧಾಕರ್

ನಟ ಯಶ್ ಅವರಿಗೆ ನೋಟಿಸ್ ನೀಡಿಲ್ಲ. ಬದಲಿಗೆ ಮನವಿ ಮಾಡಲಾಗಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ನಟ ಯಶ್ ಬಂದೂಕಿನಿಂದ ಸಿಗರೇಟ್ ಹಚ್ಚಿಕೊಳ್ಳುವ ಸೀನ್ ಇತ್ತು. ಈ ಹಿನ್ನೆಲೆ ಅವರಿಗೆ ಆರೋಗ್ಯ ಇಲಾಖೆಯಿಮದ ಮನವಿ ಮಾಡಲಾಗಿತ್ತು. ಆದರೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಈ ಹಿನ್ನೆಲೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು, ನಟ ಯಶ್ ಅವರು ಒಬ್ಬ ಅದ್ಭುತ ಕಲಾವಿದ. ಜೊತೆಗೆ ಅವರಿಂದ ಅನೇಕರಿಗೆ ಸಹಾಯವಾಗಿದ್ದು, ನನಗೂ ಅವರ ಮೇಲೆ ಅಭಿಮಾನವಿದೆ. ಆದರೆ ಚಿತ್ರದಲ್ಲಿ ಧೂಮಪಾನದ ದೃಶ್ಯ ಸ್ವಲ್ಪ ಬೇಸರ ತರಿಸಿತು. ಹೀಗಾಗಿ ಈ ದೃಶ್ಯವನ್ನು ತೆಗೆದುಹಾಕುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

 

Add Comment