ಉಚಿತ ಆರೋಗ್ಯ ತಪಾಸಣಾ ಶಿಬಿರ – ಅರಸೀಕೆರೆಯಲ್ಲಿ ನಡೆದ ಕಾರ್ಯಕ್ರಮ

ಹಾಸನ ಜಿಲ್ಲೆ ಅರಸೀಕೆರೆಯ ನಗರಸಭೆ 1ನೇ ವಾರ್ಡಿನ ಸದಸ್ಯರಾದ ಹರ್ಷವರ್ಧನ್ ಕಂತೆನಹಳ್ಳಿ ಅವರು ಅಂಗನವಾಡಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಇಲಾಖೆಯ ಟಿಹೆಚ್‍ಒ ಡಾಕ್ಟರ್ ನಾಗಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿದ್ದು, ನಗರಸಭೆ 1ನೇ ವಾರ್ಡಿನ ಸದಸ್ಯರಾದ ಹರ್ಷವರ್ಧನ್ ಕಂತೆನಹಳ್ಳಿ ಉದ್ಘಾಟನೆಯನ್ನು ನೇರವೇರಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾಕ್ಟರ್ ಸುರೇಶ್, ಅರಸೀಕೆರೆ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು, ಅಂಗನವಾಡಿ ನೌಕರರು ಹಾಗೂ ಆಶಾ ಕಾರ್ಯಕರ್ತರು ಕಂತೆನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

ಎಸ್ಎಲ್ಎನ್ ಯೋಗೇಶ್ ಕೆಟಿವಿ ನ್ಯೂಸ್ ಅರಸೀಕೆರೆ

ಕೆ.ಟಿವಿ ನ್ಯೂಸ್ ಕನ್ನಡ

Add Comment