19 ಅಡಿ ಎತ್ತರದ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಳಸ ಪ್ರತಿಷ್ಠಾಪನೆ

ಹಾಸನ ಜಿಲ್ಲೆ ಅರಸೀಕೆರೆ ನಗರಸಭಾ ವಾರ್ಡ ಸಂಖ್ಯೆ 3ರ ಎಡಭಾಗದಲ್ಲಿ 19 ಅಡಿ ಎತ್ತರದ ಮುನೇಶ್ವರ ಸ್ವಾಮಿ ವಿಗ್ರಹದ ಮೇಲ್ಬಾಗದಲ್ಲಿ ಕಬ್ಬಿಣದ ಕಳಸಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡಿ ಪ್ರತಿಷ್ಠಾಪನೆ ಮಾಡಲಾಯಿತು. ಶುಭ ಲಗ್ನದ ಮಕರ ಸಂಕ್ರಾಂತಿ ಮತ್ತು ಪೊಂಗಲ್ ಹಬ್ಬದ ದಿನದಂದು ಚಾಲನೆಯನ್ನು ನೀಡಿದ್ದು, ನಗರಸಭಾ ಸದಸ್ಯರಾದ ಮನೋಹರ್ , ಶ್ರೀ ಮುನೇಶ್ವರ ಸ್ವಾಮಿ ವಿಗ್ರಹದ ಹಾಗೂ ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅರಸೀಕೆರೆ ಗುತ್ತಿಗೆದಾರರಾದ ಚಂದ್ರು ಮತ್ತು ಅರಸೀಕೆರೆ ಹೆಸರಾಂತ ಬಿಲ್ಡಿಂಗ್ ಕಂಟ್ರಾಕ್ಟರ್ ಹರೀಶ್ ಮತ್ತು ಕೆ ಅರುಣ್ , ಮಂಜು ಇವರಗಳ ಸಂಯುಕ್ತ ಆಶ್ರಯದಲ್ಲಿ ನೆರವೇರಿಸಲಾಗಿದೆ. ಕಾಮಗಾರಿಗೆ ಚಾಲನೆ ನೀಡಿದ ನಗರಸಭಾ ಸದಸ್ಯರಾದ ಮನೋಹರ್ ರವರು ಹಾಸನ ರಸ್ತೆಯ ಭಕ್ತಾದಿಗಳು ಬಂಧುಗಳ ಸಹಕಾರದೊಂದಿಗೆ ಈ ಒಂದು ದೇವಾಲಯದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಿನ ದಿನಗಳಲ್ಲಿ ದಿನಾಂಕ ನಿಗದಿ ಪಡಿಸುತ್ತೇವೆ ಎಂದು ತಿಳಿಸಿದರು. ದೃಶ್ಯ ಮಾಧ್ಯಮದ ಹಾಗೂ ಪತ್ರಿಕಾ ಮಾಧ್ಯಮದ ಜೊತೆಯಲಿ ಅರ್ಚಕರು ಮಾತನಾಡಿದ್ದು ದೇವಾಲಯದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಮಾತನಾಡಿದ ಚಂದ್ರು ರವರು ಅರಸೀಕೆರೆ ಸಾರ್ವಜನಿಕ ಬಂಧುಗಳು ಹಾಸನ ರಸ್ತೆ ನಾಗರಿಕರರೂ, ಭಕ್ತಾದಿಗಳ ಸಹಕಾರದೊಂದಿಗೆ ಈ ಒಂದು ದೇವಾಲಯದ ಜೀರ್ಣೋದ್ದಾರ ಮಾಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀ ಮುನೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಸತ್ಯ , ಸರ್ವ ಸದಸ್ಯರುಗಳು, ಹಾಸನ ರಸ್ತೆಯ ಸಾರ್ವಜನಿಕ ಬಂಧುಗಳು ಹಾಗೂ ಅರಸೀಕೆರೆ ತಾಲೂಕಿನ ಭಕ್ತಾದಿಗಳು, ರೈತಬಾಂಧವರು ಹಾಜರಿದ್ದರು

ಎಸ್ಎಲ್ಎನ್ ಯೋಗೇಶ್ ಕೆ.ಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ನ್ಯೂಸ್ ಕನ್ನಡ

Add Comment