ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ – ಅರಸೀಕೆರೆಯಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ

ಅರಸೀಕೆರೆ ನಗರದ ಪ್ರಮುಖ ದೇವಾಲಯಗಳಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ದೊಂದಿಗೆ ವಿಶಿಷ್ಟವಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಶ್ರೀ ಬಲಮುರಿ ಶಕ್ತಿ ಗಣಪತಿ ಮತ್ತು ಪ್ರವಾಸಿ ಮಂದಿರದ ಹತ್ತಿರದಲ್ಲಿರುವ ಭಕ್ತಾದಿಗಳು ಬೆಳಗ್ಗೆ 5 ಗಂಟೆಯಿಂದ ಶ್ರದ್ಧೆ-ಭಕ್ತಿಯಿಂದ ಅರ್ಚಕರಾದ ನಾಗರಾಜುರವರು ಪೂಜೆಯನ್ನು ಮಾಡಿದ್ದು ನಂತರ ಭಕ್ತಾದಿಗಳಿಗೆ ಎಳ್ಳು ಬೆಲ್ಲವನ್ನು ಮತ್ತು ಸಿಹಿ ಪೊಂಗಲನ ಹಂಚಿ ಹಬ್ಬವನ್ನು ಆಚರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಸುರೇಂದರ್ ಸುರೇಶ್ ಮಾತನಾಡಿದ್ದು ಕೊರೋನಾ ಕಾರಣದಿಂದ ದೇವಸ್ಥಾನದಲ್ಲಿ ಪ್ರಸಾಧವನ್ನು ವಿತರಣೆ ಮಾಡಿರಲಿಲ್ಲ ಆದರೆ ಇಂದು ಬಹಳ ದಿನಗಳ ನಂತರ ಪ್ರಸಾದ ವಿತರಣೆ ಮಾಡಲಾಯಿತು ಎಂದರು. ನಂತರ ಅರಸೀಕೆರೆ ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡರು ಮಾತನಾಡಿದ್ದು  2021 ನೇ ಸಾಲಿನಲ್ಲಿ ರೈತರಿಗೆ ಮಳೆ-ಬೆಳೆ ಆಗಲೆಂದು ಹಾಗೂ ಸಾರ್ವಜನಿಕ ಬಂಧುಗಳಿಗೆ ಒಳ್ಳೆಯದಾಗಲಿ ಎಂದರು. ನಂತರ ಅರ್ಚಕರಾದ ರಂಗಸ್ವಾಮಿ ಮಾತನಾಡಿದ್ದು ರೈತ ಬಾಂಧವರಿಗೆ ಅನುಕೂಲವಾಗಲಿ ಎಂದು ಅಮ್ಮನವರಿಗೆ ವಿಶೇಷ ಪೂಜೆ ಮಾಡಿರುತ್ತೇವೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಭಕ್ತಾದಿಗಳು , ಸಾರ್ವಜನಿಕ ಬಂಧುಗಳು ಹಾಜರಿದ್ದರು.

ಎಸ್ಎಲ್ಎನ್ ಯೋಗೇಶ್ ಕೆ.ಟಿವಿ ನ್ಯೂಸ್ ಅರಸೀಕೆರೆ
ಕೆ.ಟಿವಿ ನ್ಯೂಸ್ ಕನ್ನಡ

Add Comment